Select Your Language

Notifications

webdunia
webdunia
webdunia
webdunia

ಒಮಿಕ್ರೋನ್‌ನಲ್ಲಿ ಭೇದಿಸುವ ಶಕ್ತಿ ಹೆಚ್ಚು!

ಒಮಿಕ್ರೋನ್‌ನಲ್ಲಿ ಭೇದಿಸುವ ಶಕ್ತಿ ಹೆಚ್ಚು!
ನವದೆಹಲಿ , ಭಾನುವಾರ, 12 ಡಿಸೆಂಬರ್ 2021 (10:45 IST)
ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ವೇಗವಾಗಿ ವ್ಯಾಪಿಸುತ್ತಿರುವ ರೂಪಾಂತರಿ ಒಮಿಕ್ರಾನ್ ವೈರಸ್ನಲ್ಲಿ ಮನುಷ್ಯನ ಸ್ವಾಭಾವಿಕ ರೋಗ ನಿರೋಧಕ ಶಕ್ತಿಯನ್ನು ಭೇದಿಸುವ ಶಕ್ತಿ ಅಧಿಕವಾಗಿದೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಸಾಬೀತಾಗಿದೆ.

ಡೆಲ್ಟಾ ಮತ್ತು ಬೀಟಾಗಿಂತ 3 ಪಟ್ಟು ಹೆಚ್ಚಿದೆ ಎಂದು ಅಧ್ಯಯನದಲ್ಲಿ ಪುರಾವೆ ಲಭ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಮರು ಸೋಂಕಿಗೆ ತುತ್ತಾದವರ ಆರೋಗ್ಯದ ಗಂಭೀರತೆ ಕಾರಣ ಆಗುತ್ತದೆಯೇ ಮತ್ತು ಲಸಿಕೆ ಪಡೆದವರಲ್ಲಿ ಈ ಸೋಂಕು ತಟಸ್ಥವಾಗಿರಲಿದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ಹಿನ್ನೆಲೆಯಲ್ಲಿ ಲಸಿಕೆಗೆ ಈ ವೈರಸ್ ಬಗ್ಗಲ್ಲ ಎಂದು ಈಗಲೇ ಹೇಳಲಾಗದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಮಿಕ್ರಾನ್ ಭೀತಿ ಜಾಗತಿಕ ಮಟ್ಟದಲ್ಲಿ ತಣ್ಣಗೆ ಆವರಿಸುತ್ತಿದೆ.

ಅಷ್ಟೇನೂ ತೀವ್ರವಾದ ಲಕ್ಷಣಗಳನ್ನು ಹೊಂದಿರದ ಈ ವೈರಾಣು ಸೋಂಕು ಲಸಿಕೆ ಪಡೆದು ಮೂರು ನಾಲ್ಕು ತಿಂಗಳಾದರೂ ವ್ಯಕ್ತಿಯನ್ನು ಆವರಿಸುವ ಸಾಮರ್ಥ್ಯ ಹೊಂದಿದೆ ಎಂದು ಈ ಹೊಸ ರೂಪಾಂತರಿಯನ್ನು ಪತ್ತೆ ಮಾಡಿದ ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘಟನೆಯ ಅಧ್ಯಕ್ಷರಾದ ಡಾ.ಏಂಜೆಲಿಕ್ ಕೊಯೆಟ್ಜಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನವವಿವಾಹಿತೆ ನೇಣಿಗೆ ಶರಣಾದ್ದದ್ರು ಯಾಕೆ?!