Select Your Language

Notifications

webdunia
webdunia
webdunia
webdunia

ಮೋದಿ ಸರ್ಕಾರಕ್ಕೆ ಸುಪ್ರೀಂಕೋರ್ಟಿನಿಂದ ಕಪಾಳ ಮೋಕ್ಷ !

ಮೋದಿ ಸರ್ಕಾರಕ್ಕೆ ಸುಪ್ರೀಂಕೋರ್ಟಿನಿಂದ ಕಪಾಳ ಮೋಕ್ಷ !
ನವದೆಹಲಿ , ಬುಧವಾರ, 10 ಏಪ್ರಿಲ್ 2019 (18:23 IST)
ರಫೇಲ್ ಹಗರಣ ಕುರಿತು ಸುಪ್ರೀಂಕೋರ್ಟ್ ತನ್ನ ನಿರ್ಧಾರ ತಿಳಿಸಿದ್ದು, ಕೇಂದ್ರ ಸರ್ಕಾರವು ಸಲ್ಲಿಸಿದ್ದ ಎಲ್ಲಾ ಆಕ್ಷೇಪಣೆಗಳನ್ನೂ ಸರ್ವಾನುಮತದಿಂದ ತಳ್ಳಿಹಾಕಿದೆ. ಇದರಿಂದ ಮೋದಿ ಸರಕಾರಕ್ಕೆ ಭಾರೀ ಮುಖಭಂಗವಾದಂತಾಗಿದೆ.

"ಹಿಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಗಳನ್ನೂ ಒಳಗೊಂಡಂತೆ ಇಲ್ಲಿಯವರೆಗೆ ಪ್ರಕಟವಾದ ಎಲ್ಲಾ ದಾಖಲೆಗಳನ್ನೂ ರಫೇಲ್ ಒಪ್ಪಂದದ ಪ್ರಕರಣದಲ್ಲಿ ಪರಿಶೀಲಿಸಲಾಗುವುದು" ಎಂದು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್ ಗೊಗೋಯ್ ತಿಳಿಸಿದ್ದಾರೆ.  

ಹಿಂದು ಪತ್ರಿಕೆಯು ರಫೇಲ್ ಒಪ್ಪಂದ ಕುರಿತ ವರದಿಗಳನ್ನು ಪ್ರಕಟಿಸುವ ಮೂಲಕ 'ಪಿತೂರಿ' ನಡೆಸುತ್ತಿದೆ ಎಂಬ ವಾದವನ್ನೂ ಸುಪ್ರೀಂಕೋರ್ಟ್ ತಳ್ಳಿಹಾಕಿತು.

ರಕ್ಷಣಾ ಇಲಾಖೆಯ ದಾಖಲೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ರಾಷ್ಟ್ರದ ಭದ್ರತೆ ಅಪಾಯದಲ್ಲಿದೆ ಮತ್ತು ಆ ದಾಖಲೆಗಳ ಸೋರಿಕೆಯು 'ಅಧಿಕೃತ ಗೋಪ್ಯತೆ ಕಾಯಿದೆ'ಯ ಪ್ರಕಾರ ಅಪರಾಧವಾಗುತ್ತದೆ ಎಂದೂ ಕೇಂದ್ರ ಸರ್ಕಾರ ಆಕ್ಷೇಪಣೆ ಸಲ್ಲಿಸಿತ್ತು. 

ಮುಂದಿನ ವಿಚಾರಣೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಡಿ ಬಾಸ್ ಅಭಿಮಾನಿಗಳು ಜೆಡಿಎಸ್ ಸೇರ್ಪಡೆ: ಸುಮಲತಾಗೆ ಶಾಕ್