Publish Date: Mon, 18 Dec 2017 (10:26 IST)
Updated Date: Mon, 18 Dec 2017 (10:30 IST)
ಹುಬ್ಬಳ್ಳಿ: ನಾವು ಎರಡೂ ರಾಜ್ಯಗಳಲ್ಲಿ ಬಹುಮತ ಸಾಧಿಸುತ್ತೇವೆ ಎಂದು ಗುಜರಾತ್ –ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಫಲಿತಾಂಶ ರಾಜ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಮೋದಿಯವರ ಸಾಧನೆ ನೋಡಿ ಜನ ಮನ್ನಣೆ ನೀಡಿದ್ದಾರೆ.
ಇಡೀ ದೇಶ ಬಿಜೆಪಿ ಮಯವಾಗಿರುವುದನ್ನು ನೋಡಿ ಕಾಂಗ್ರೆಸ್ ನಲ್ಲಿ ತಳಮಳ ಉಂಟಾಗಿದೆ ಎಂದಿದ್ದಾರೆ. ಇನ್ನು ಈಶಾನ್ಯ ಭಾರತದ ಕೆಲಭಾಗದಲ್ಲಿ ಕಾಂಗ್ರೆಸ್ ಇರಬಹುದು ಆದರೆ ಮುಂದಿನ ದಿನಗಳಲ್ಕಿ ಅದನ್ನು ಕೂಡ ಬಿಜೆಪಿ ಗೆಲ್ಲಲಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.