Publish Date: Mon, 18 Dec 2017 (09:45 IST)
Updated Date: Mon, 18 Dec 2017 (09:46 IST)
ಅಹಮ್ಮದಾಬ್: ಗುಜರಾತ್ ಚುನಾವಣೆ ಫಲಿತಾಂಶ ಈ ಬಾರಿ ಆಡಳಿತಾರೂಢ ಬಿಜೆಪಿಗೆ ಕಹಿ ಗುಳಿಗೆಯನ್ನೇ ನೀಡುತ್ತಾ ಎನ್ನುವ ಆತಂಕದ ಕ್ಷಣ ಎದುರಾಗಿತ್ತು. ಆದರೆ ಇದೀಗ ಮತ್ತೆ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ಸಮಾಧಾನದ ನಿಟ್ಟುಸಿರು ಬಿಟ್ಟಿದೆ.
ಕೆಲವು ಕ್ಷಣಗಳ ಮೊದಲು ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಬಿಜೆಪಿ ಹಿಂದೆ ಬಿದ್ದಿತ್ತು. ಹೀಗಾಗಿ ಗುಜರಾತ್ ನಲ್ಲಿ ಬಿಜೆಪಿಯ 2 ದಶಕಗಳ ಆಡಳಿತಕ್ಕೆ ತೆರೆ ಬೀಳುತ್ತಾ ಎನ್ನುವ ಅನುಮಾನ ಮೂಡಿತ್ತು.
ಆದರೆ ಮತ್ತೆ ಕಾಂಗ್ರೆಸ್ ಹಿನ್ನಡೆ ಸಾಧಿಸಿರುವುದು ಬಿಜೆಪಿಗೆ ಸಮಾಧಾನ ತಂದಿದೆ. ಬಿಜೆಪಿ 101 ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ 78 ಸ್ಥಾನ ಪಡೆದಿದೆ. ಹಾಗಿದ್ದರೂ ಕಾಂಗ್ರೆಸ್ ಹೆಚ್ಚಿನ ಮುನ್ನಡೆ ಸಾಧಿಸಿದ ಸಂಭ್ರಮದಲ್ಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ