Publish Date: Mon, 18 Dec 2017 (10:13 IST)
Updated Date: Mon, 18 Dec 2017 (10:15 IST)
ಅಹಮ್ಮದಾಬಾದ್: ರಾಜ್ ಕೋಟ್ ಪಶ್ಚಿಮ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಸಿಎಂ ವಿಜಯ್ ರೂಪಾಣಿ ಇದೀಗ ಬಂದ ವರದಿಯ ಪ್ರಕಾರ ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕೆಲವು ಕ್ಷಣಗಳ ಮೊದಲು ಹಿನ್ನಡೆಯಲ್ಲಿದ್ದ ವಿಜಯ್ ರೂಪಾಣಿ ಬಿಜೆಪಿ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದ್ದರು. ಒಂದು ವೇಳೆ ಅವರು ಸೋತರೆ ಬಿಜೆಪಿಗೆ ಮುಖಭಂಗವಾಗಲಿತ್ತು. ಆದರೆ ಇದೀಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
ಸುಮಾರು 7000 ಮತಗಳಿಂದ ವಿಜಯ್ ಎದುರಾಳಿ ಉದ್ಯಮಿ ಇಂದ್ರಾಣಿ ರಾಜ್ ಗುರು ಎದುರು ಮುನ್ನಡೆ ಸಾಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ