Publish Date: Sat, 04 May 2019 (12:21 IST)
Updated Date: Sat, 04 May 2019 (12:25 IST)
ನವದೆಹಲಿ : ಸ್ಥಳೀಯ ಹಾವಾಡಿಗರ ಬಳಿ ಇದ್ದ ಹಾವನ್ನು ಬುಟ್ಟಿಯಿಂದ ತೆಗೆದು ಮೈ ಸವರಿದ ಪ್ರಿಯಾಂಕಾ ಗಾಂಧಿಯ ಅವರ ಕುರಿತು ಟೀಕೆ ಮಾಡುವುದರ ಮೂಲಕ ಇದೀಗ ಪ್ರಧಾನಿ ಮೋದಿ ಅವರು ನೆಹರು ವಂಶಸ್ಥರ ಕಾಲೆಳೆದಿದ್ದಾರೆ.
ಇತ್ತೀಚೆಗಷ್ಟೇ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ, ಸ್ಥಳೀಯ ಹಾವಾಡಿಗರ ಬಳಿ ಇದ್ದ ಹಾವನ್ನು ಬುಟ್ಟಿಯಿಂದ ತೆಗೆದು ಮೈ ಸವರಿದ್ದರು. ಈ ವಿಡಿಯೋ ಸಾಕಷ್ಟು ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡದ ಪ್ರಧಾನಿ ನರೇಂದ್ರ ಮೋದಿ ಅವರು, ದಶಕಗಳ ಹಿಂದೆ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ಹಾವಾಡಿಗ ಹಾವಾಡಿಸುತ್ತಿರುವ ದೃಶ್ಯವನ್ನು ನೋಡಿ ಆನಂದಿಸುತ್ತಿರುವ ಫೋಟೋ ಒಂದನ್ನು ಉಲ್ಲೇಖಿಸಿ ಪ್ರಿಯಾಂಕಾ ಗಾಂಧಿಯ ಕಾಲೆಳೆದಿದ್ದಾರೆ.
ಜವಹರ್ ಲಾಲ್ ನೆಹರು ತಮ್ಮ ಕಾಲದಲ್ಲಿ ಮಾಡಿದ ಅದೇ ಕೆಲಸವನ್ನು ಅವರ ನಾಲ್ಕನೇ ತಲೆಮಾರು ಮಾಡುತ್ತಿರುವುದು ದುರದೃಷ್ಟಕರ. ಭಾರತ ಈಗ ಕೇವಲ ಹಾವಾಡಿಗರ ದೇಶವಾಗಿ ಮಾತ್ರ ಉಳಿದಿಲ್ಲ. ಅದರ ಹೊರತಾಗಿಯೂ ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ. ಆದರೆ ಈ ವಿಚಾರ ಗಾಂಧಿ ಕುಟುಂಬಕ್ಕೆ ಇನ್ನೂ ಅರ್ಥವಾಗಿಲ್ಲ ಎಂದು ಪ್ರಧಾನಿ ಮೋದಿ ಲೇವಡಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.