Webdunia - Bharat's app for daily news and videos

Install App

ನನ್ನ ಫೋಟೋ ಹಾಕಲು ರಾಹುಲ್ ಗಾಂಧಿ ಯಾರು: ಮಿಂತಾ ದೇವಿ ಫುಲ್ ಗರಂ

Krishnaveni K
ಬುಧವಾರ, 13 ಆಗಸ್ಟ್ 2025 (10:57 IST)
Photo Credit: X
ನವದೆಹಲಿ: ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಮತಗಳ್ಳತನ ಆರೋಪಿಸಿ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್ ನಾಯಕರು ಮಿಂತಾ ದೇವಿ ಟಿ ಶರ್ಟ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಅವರು ಸಿಟ್ಟಾಗಿದ್ದು ನನ್ನ ಫೋಟೋ ಹಾಕಲು ರಾಹುಲ್ ಗಾಂಧಿಗೆ ಅಧಿಕಾರ ಕೊಟ್ಟವರು ಯಾರು ಎಂದಿದ್ದಾರೆ.

ಬಿಹಾರದಲ್ಲಿ ಮತ ಪಟ್ಟಿ ಪರಿಷ್ಕರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರಾಹುಲ್ ಗಾಂಧಿ, ಪ್ರಿಯಾಂಕ  ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಮಿಂತಾ ದೇವಿ ಫೋಟೋ ಇರುವ ಟಿ ಶರ್ಟ್ ಧರಿಸಿದ್ದಾರೆ. ಬಿಹಾರದ ಪರಿಷ್ಕೃತ ಮತಪಟ್ಟಿಯಲ್ಲಿ 124 ವರ್ಷದ ಮಿಂತಾ ದೇವಿ ಮೊದಲ ಬಾರಿಯ ಮತದಾರಳು ಎಂದು ಸೇರ್ಪಡೆ ಮಾಡಿರುವುದನ್ನು ಅಸ್ತ್ರವಾಗಿಸಿ ಕಾಂಗ್ರೆಸ್ ನಾಯಕರು ಆ ಮಹಿಳೆಯ ಫೋಟೋ ಇರುವ ಟಿಶರ್ಟ್ ಧರಿಸಿ ಪ್ರತಿಭಟನೆ ನಡೆಸಿದ್ದಾರೆ.

ಆದರೆ ಇದಕ್ಕೆ ಸ್ವತಃ ಮಿಂತಾ ದೇವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ನನ್ನ ವಯಸ್ಸು ತಪ್ಪಾಗಿದೆ ಎಂದು ಎರಡು ದಿನದ ಹಿಂದಷ್ಟೇ ತಿಳಿಯಿತು. ಈ ಬಗ್ಗೆ ಇಷ್ಟೊಂದು ಕಾಳಜಿ ಮಾಡಲು ರಾಹುಲ್ ಗಾಂಧಿ, ಪ್ರಿಯಾಂಕ ಯಾರು? ನನ್ನ ವಯಸ್ಸಿನ ಬಗ್ಗೆ ಅವರೇಕೆ ಚಿಂತಿತರಾಗಿದ್ದಾರೆ? ಅಷ್ಟಕ್ಕೂ ನನ್ನ ಹೆಸರಿನ ಟಿಶರ್ಟ್ ಧರಿಸಿರುವುದು ಯಾಕೆ? ಎಂದಿರುವ ಅವರು ನನ್ನ ವಯಸ್ಸು 124 ಆಗಿದ್ದರೆ ನನಗೆ ವೃದ್ಧಾಪ್ಯ ವೇತನ ಬರಬೇಕಿತ್ತು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ರಹ್ಮಾವರ: ಗಂಡ ಕೋರ್ಟ್ ವಿಚಾರಣೆಗೆ ಹಾಜರು, ಇತ್ತ ಮಗುವನ್ನು ಕೊಂದು ಪತ್ನಿ ಆತ್ಮಹತ್ಯೆ

ಬೀದಿನಾಯಿಗಳು ನನಗೆ ಪ್ರಪಂಚದಾದ್ಯಂತ ಖ್ಯಾತಿ ತಂದುಕೊಟ್ಟಿತು: ಜಡ್ಜ್‌ ವಿಕ್ರಮ್ ನಾಥ್ ಹಾಸ್ಯ ಚಟಾಕಿ

ಉಪರಾಷ್ಟ್ರಪತಿ ನಿವಾಸ ಖಾಲಿ ಮಾಡಿದ ಜಗದೀಪ್ ಧಂಖರ್‌, ಹೋಗಿದ್ದೆಲ್ಲಿ ಗೊತ್ತಾ

ಮೊಮ್ಮಕ್ಕಳಾಡಿಸಿರುವ 55ನೇ ವಯಸ್ಸಿನ ಮಹಿಳೆ 17ನೇ ಮಗುವಿಗೆ ಜನ್ಮ, ಗ್ರಾಮವೇ ಶಾಕ್‌

ಧರ್ಮಸ್ಥಳ ಚಲೋ ಹಗುರವಾಗಿ ತೆಗೆದುಕೊಳ್ಳದಿರಿ: ವಿಜಯೇಂದ್ರ ಎಚ್ಚರ

ಮುಂದಿನ ಸುದ್ದಿ
Show comments