Select Your Language

Notifications

webdunia
webdunia
webdunia
webdunia

ಮಾಜಿ ಗೆಳತಿಯನ್ನು ಹಿಂಬಾಲಿಸುತ್ತಿದ್ದ ವಿವಾಹಿತನಿಗೆ ಬೆಂಕಿ ಹಚ್ಚಿದ್ಯಾರು?

ಮಾಜಿ ಗೆಳತಿಯನ್ನು ಹಿಂಬಾಲಿಸುತ್ತಿದ್ದ ವಿವಾಹಿತನಿಗೆ ಬೆಂಕಿ ಹಚ್ಚಿದ್ಯಾರು?
ಬರೇಲಿ , ಬುಧವಾರ, 7 ಏಪ್ರಿಲ್ 2021 (07:58 IST)
ಬರೇಲಿ : 20 ವರ್ಷದ ಮಾಜಿ ಗೆಳತಿಯನ್ನು ಹಿಂಬಾಲಿಸಿದ್ದಕ್ಕಾಗಿ ವಿವಾಹಿತ ವ್ಯಕ್ತಿಯೊಬ್ಬನಿಗೆ ಬೆಂಕಿ ಹಚ್ಚಿದ ಘಟನೆ  ಉತ್ತರಪ್ರದೇಶದ  ಬರೇಲಿಯ ಬಹೇಡಿ ಪ್ರದೇಶದಲ್ಲಿ ನಡೆದಿದೆ.

ಯುವತಿ ಹಾಗೂ ಸಂತ್ರಸ್ತ ಸಂಬಂಧದಲ್ಲಿದ್ದರು, ಆದರೆ ಸಂತ್ರಸ್ತನಿಗೆ ಮದುವೆಯಾಗಿ ಒಂದು ಮಗುವಿದೆ ಎಂದು ತಿಳಿದ ಬಳಿಕ ಯುವತಿ ಆತನ ಸಂಬಂಧ ಮುರಿದುಕೊಂಡಿದ್ದಾಳೆ. ಈ ನಡುವೆ ಆತ ಆಕೆಯನ್ನು ಯಾವಾಗಲೂ ಹಿಂಬಾಲಿಸುತ್ತಿದ್ದ. ಆದರೆ ಆತ ಇತ್ತೀಚೆಗೆ ಬೆಂಕಿಯಲ್ಲಿ ಸುಟ್ಟು ಹೋದ ಹಿನ್ನಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು , ಈ ಘಟನೆ ಯುವತಿಯ ಮನೆ ಮುಂದೆ ನಡೆದ ಹಿನ್ನಲೆಯಲ್ಲಿ ಯುವತಿಯ ಮನೆಯವರು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಯುವತಿ ಆತ ತನಗೆ ತಾನೇ ಬೆಂಕಿ ಹಚ್ಚಿಕೊಂಡಿರುವುದಾಗಿ ಹೇಳಿದ್ದಾಳೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳನ್ನು ಹೊಡೆದು ಕೊಂದ ತಂದೆ