Select Your Language

Notifications

webdunia
webdunia
webdunia
webdunia

ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ

ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ
ಮಲಪ್ಪುರಂ , ಶನಿವಾರ, 23 ಜನವರಿ 2021 (10:56 IST)
ಮಲಪ್ಪುರಂ : ಕೇರಳದ ಮಲಪ್ಪುರಂ ನ 17 ವರ್ಷದ ಹುಡುಗಿ ತನ್ನ ಮೇಲೆ ಸಂಬಂಧಿಕರು ಸೇರಿದಂತೆ  ಹಲವು ಮಂದಿ ಪುರುಷರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.

ತಾಯಿ ಮತ್ತು ಸೋದರ ಮಾವನ ಜೊತೆಗಿದ್ದ ಹುಡುಗಿಯ ಮೇಲೆ ಸೋದರ ಮಾವ ಹಲವು ಬಾರಿ ಮಾನಭಂಗ ಎಸಗಿದ್ದಾನೆ. ಮನೆಬಿಟ್ಟು ಚೈಲ್ಡ್ ಹೋಮ್ ಗೆ ಬಂದ ಹುಡುಗಿ ಬಳಿಕ ಅಲ್ಲಿಂದ ನಾಪತ್ತೆಯಾಗಿದ್ದಳು. ಆ ವೇಳೆ ಆಕೆಯ ಮೇಲೆ ಹಲವು ಮಂದಿ ಮಾನಭಂಗ ಎಸಗಿದ್ದಾರೆ ಎನ್ನಲಾಗಿದೆ. ಬಳಿಕ ಆಕೆಯನ್ನು ನಿರ್ಭಯ ಕೇಂದ್ರಕ್ಕೆ ಕರೆತರಲಾಯಿತು. ಅಲ್ಲಿ ಕೌನ್ಸಲಿಂಗ್ ವೇಳೆ ಆಕೆ ಈ ವಿಚಾರವನ್ನು ತಿಳಿಸಿದ್ದಾಳೆ.

ಈ ಬಗ್ಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು 20 ಮಂದಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಾಯಿಯ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ವ್ಯಕ್ತಿಗೆ ಮಗ ಮಾಡಿದ್ದೇನು ಗೊತ್ತಾ?