Publish Date: Tue, 19 Jan 2021 (10:43 IST)
Updated Date: Tue, 19 Jan 2021 (10:46 IST)
ಪಿಲಿಭಿತ್ : ದಲಿತ ಸಮುದಾಯದ 30 ವರ್ಷದ ಮಹಿಳೆಯ ಮೇಲೆ 40 ವರ್ಷದ ನೆರೆಮನೆಯಾತ ಮಾನಭಂಗಕ್ಕೆ ಯತ್ನಿಸಿದ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ನಲ್ಲಿ ನಡೆದಿದೆ.
ಮಹಿಳೆ ತನ್ನ ಹೊಲವನ್ನು ನೋಡಲು ಹೋದಾಗ ಆಕೆ ಒಬ್ಬಂಟಿಯಾಗಿರುವುದನ್ನು ನೋಡಿದ ನೆರೆಮನೆಯಾತ ಅವಳನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಮಾನಭಂಗಕ್ಕೆ ಯತ್ನಿಸಿದ್ದಾನೆ. ಆಗ ಮಹಿಳೆ ಜೋರಾಗಿ ಕೂಗಿಕೊಂಡ ಹಿನ್ನಲೆಯಲ್ಲಿ ಗ್ರಾಮಸ್ಥರು ಬಂದಾಗ ಆರೋಪಿ ಪರಾರಿಯಾಗಿದ್ದಾನೆ.
ಈ ಬಗ್ಗೆ ಮಹಿಳೆ ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
pavithra
Publish Date: Tue, 19 Jan 2021 (10:43 IST)
Updated Date: Tue, 19 Jan 2021 (10:46 IST)