Select Your Language

Notifications

webdunia
webdunia
webdunia
webdunia

ಹುಡುಗಿಯ ಮೇಲೆ 8 ದಿನಗಳಲ್ಲಿ 9 ಮಂದಿ ಪುರುಷರಿಂದ ಪ್ರತ್ಯೇಕ ಸ್ಥಳಗಳಲ್ಲಿ ಮಾನಭಂಗ

ಹುಡುಗಿಯ ಮೇಲೆ 8 ದಿನಗಳಲ್ಲಿ 9 ಮಂದಿ ಪುರುಷರಿಂದ ಪ್ರತ್ಯೇಕ ಸ್ಥಳಗಳಲ್ಲಿ ಮಾನಭಂಗ
ಕೋಟಾ , ಬುಧವಾರ, 10 ಮಾರ್ಚ್ 2021 (07:37 IST)
ಕೋಟಾ : 15 ವರ್ಷದ ಹುಡುಗಿಯ ಮೇಲೆ 8 ದಿನಗಳಲ್ಲಿ ಕನಿಷ್ಠ 9 ಮಂದಿ ಪುರುಷರು ಪ್ರತ್ಯೇಕ ಸ್ಥಳಗಳಲ್ಲಿ ಮಾನಭಂಗ ಎಸಗಿದ ಘಟನೆ ರಾಜಸ್ತಾನದಲ್ಲಿ ನಡೆದಿದೆ.

ಸಂತ್ರಸ್ತೆಯ ಇಬ್ಬರು ಸ್ನೇಹಿತರು ಸ್ಕೂಲ್ ಬ್ಯಾಗ್ ತೆಗೆದುಕೊಡುವುದಾಗಿ ಕರೆದುಕೊಂಡು ಹೋಗಿ ಮಾನಭಂಗ ಎಸಗಿದ್ದಾರೆ. ಬಳಿಕ ಆಕೆಯ ಮೇಲೆ ಬೇರೆ ಬೇರೆ ಸ್ಥಳಗಳಲ್ಲಿ 9 ಮಂದಿ ಪುರುಷರು ಮಾನಭಂಗ ಎಸಗಿದ್ದಾರೆ.

ಕೊನೆಗೆ ಹುಡುಗಿ ಮನೆ ತಲುಪಿದ್ದು, ನಡೆದ ವಿಚಾರವನ್ನು ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಮನೆಯವರು ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಹುಡುಗಿಯನ್ನು ಪ್ರೀತಿಸಿ ಸಾವಿಗೆ ಶರಣಾದ ಸೋದರ ಸಂಬಂಧಿಗಳು