Select Your Language

Notifications

webdunia
webdunia
webdunia
webdunia

ಭತ್ತದ ಗದ್ದೆಯಲ್ಲಿ ಯುವತಿಯ ಕೈಕಾಲು ಕಟ್ಟಿ ಮಾನಭಂಗ ಎಸಗಿ ಕೊನೆಗೆ ಮಾಡಿದ್ದೇನು?

ಭತ್ತದ ಗದ್ದೆಯಲ್ಲಿ ಯುವತಿಯ ಕೈಕಾಲು ಕಟ್ಟಿ ಮಾನಭಂಗ ಎಸಗಿ ಕೊನೆಗೆ ಮಾಡಿದ್ದೇನು?
ಉತ್ತರಪ್ರದೇಶ , ಶನಿವಾರ, 17 ಅಕ್ಟೋಬರ್ 2020 (12:17 IST)
ಉತ್ತರಪ್ರದೇಶ: 18 ವರ್ಷದ ಯುವತಿಯ ಕೈಕಾಲು ಕಟ್ಟಿ ಭತ್ತದ ಗದ್ದೆಯಲ್ಲಿ ಮಾನಭಂಗ ಎಸಗಿ ಕೊಂದ ಘಟನೆ ಉತ್ತರ ಪ್ರದೇಶದ ಬರಾಬಂಕಿ ಜಿಲ್ಲೆಯ ಸತ್ರಿಖ್ ಪ್ರದೇಶದಲ್ಲಿ ನಡೆದಿದೆ.

ಯುವತಿ ಹೊರಗಡೆ ಹೋಗಿದ್ದು ಅವಳು ಮನೆಗೆ ಹಿಂತಿರುಗದಿದ್ದಾಗ ಅವಳನ್ನು ಹುಡುಕಿಕೊಂಡು ಹೋದ ತಂದೆಗೆ ಆಕೆಯ ಶವ ಕಬ್ಬಿನ ಗದ್ದೆಯಲ್ಲಿ  ಬೆತ್ತಲಾಗಿ, ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ದಿನೇಶ್ ಗೌತಮ್(19) ಇಂತಹ ನೀಚ ಕೃತ್ಯ ಎಸಗಿದ ಆರೋಪಿ ಎನ್ನಲಾಗಿದೆ. ವಿಚಾರಣೆ ವೇಳೆ ಆತ ತನ್ನ ಅಪರಾಧಗಳನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಕಲಾಂಗ ಮಕ್ಕಳ ಕೊನೆಗಾಣಿಸಿ ತಾನೂ ಸಾವಿಗೆ ಶರಣಾದ ತಾಯಿ