ಅಲಿಗರ್ : ರಾತ್ರಿ ಮನೆಯಿಂದ ಹೊರಗೆ ಬಂದಿದ್ದ ಹುಡುಗಿಯನ್ನು ವ್ಯಕ್ತಿಯೊಬ್ಬ ಅಪಹರಿಸಿ ಮಾನಭಂಗ ಎಸಗಿದ ಘಟನೆ ಉತ್ತರ ಪ್ರದೇಶದ ಅಲಿಗರ್ ಜಿಲ್ಲೆಯಲ್ಲಿ ನಡೆದಿದೆ.
ಹುಡುಗಿಯನ್ನು ವ್ಯಕ್ತಿ ಕಾರಿನಲ್ಲಿ ಅಪಹರಿಸಿ ಚಾಕು ತೋರಿಸಿ ಬೆದರಿಕೆ ಹಾಕಿ ಮಾನಭಂಗ ಎಸಗಿದ್ದಾನೆ. ಆ ವೇಳೆ ಹುಡುಗಿ ಕೂಗಿಕೊಂಡಾಗ ಸಹಾಯಕ್ಕೆಂದು ಬಂದ ಚಿಕ್ಕಪ್ಪನಿಗೆ ಆರೋಪಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಅವರಿಗೆ ಸಣ‍್ಣಪುಟ್ಟ ಗಾಯಗಳಾಗಿದೆ.
ಈ ಬಗ್ಗೆ ಹುಡುಗಿಯ ತಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.