Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕ ಪ್ರೀತಿಸುವ ನಾಟಕವಾಡಿ ಯುವತಿಗೆ ಮಾಡಿದ್ದೇನು ಗೊತ್ತಾ?

ಫೇಸ್ ಬುಕ್ ನಲ್ಲಿ ಪರಿಚಯವಾದ ಯುವಕ ಪ್ರೀತಿಸುವ ನಾಟಕವಾಡಿ ಯುವತಿಗೆ ಮಾಡಿದ್ದೇನು ಗೊತ್ತಾ?
ಜಾರ್ಖಂಡ್ , ಬುಧವಾರ, 21 ಏಪ್ರಿಲ್ 2021 (07:20 IST)
ಜಾರ್ಖಂಡ್ : ಸೋಶಿಯಲ್ ಮೀಡಿಯಾದಲ್ಲಿ ಪರಿಚಯನಾದ ವ್ಯಕ್ತಿ ಪ್ರೀತಿಯ ನಾಟಕವಾಡಿ ಯುವತಿಯಿಂದ ಲಕ್ಷಾಂತರ ಹಣ ಮತ್ತು ಆಭರಣಗಳನ್ನು ದೋಚಿದ ಘಟನೆ ಜಾರ್ಖಂಡ್ ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.

ಯುವತಿಗೆ ಆರೋಪಿ ಫೇಸ್ ಬುಕ್ ನಲ್ಲಿ ಗೆಳೆಯನಾಗಿದ್ದಾನೆ. ಪರಸ್ಪರ ಮಾತುಕತೆ ನಡೆಸುತ್ತಿದ್ದ ಇಬ್ಬರು  ಬಳಿಕ ಭೇಟಿಯಾಗಿ ಪ್ರೀತಿಸಲು ಶುರುಮಾಡಿ  ಯಾವಾಗಲೂ ಜೊತೆಯಾಗಿರುತ್ತಿದ್ದರು. ಯುವತಿ ಆತನಿಗೆ ಬೈಕ್ , ಹಣ ಕೂಡ ನೀಡಿದ್ದಳು. ಆದರೆ ಮದುವೆ ವಿಚಾರ ಬಂದ ತಕ್ಷಣ ಆತ ಆಕೆಯ ಮೇಲೆ ಹಲ್ಲೆ ಮಾಡಿ ಹಣ ಮತ್ತು ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿ ಹಣ, ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿ ಮಗಳನ್ನೇ ಕೊಂದ ಪಾಪಿ ತಂದೆ