Select Your Language

Notifications

webdunia
webdunia
webdunia
webdunia

ಚಪ್ಪಲಿಯಲ್ಲಿ ಹೊಡೆದ ಮಹಿಳೆಗೆ ಇಂತಹ ಗತಿ ತಂದ ವ್ಯಕ್ತಿ

ಚಪ್ಪಲಿಯಲ್ಲಿ ಹೊಡೆದ ಮಹಿಳೆಗೆ ಇಂತಹ ಗತಿ ತಂದ ವ್ಯಕ್ತಿ
ಬೆಂಗಳೂರು , ಮಂಗಳವಾರ, 2 ಮಾರ್ಚ್ 2021 (09:19 IST)
ಬೆಂಗಳೂರು : ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಜನರ ಮುಂದೆಯೇ  ನೆರೆಮನೆಯ 30 ವರ್ಷದ ಮಹಿಳೆಯನ್ನು ಚಾಕುವಿನಿಂದ ಇರಿದ ಘಟನೆ ನಡೆದಿದೆ.

ಮಹಿಳೆ ನೆರೆಮನೆಯ ಆರೋಪಿಯ ಜೊತೆ ಕಲಹ ಮಾಡಿಕೊಂಡಿದ್ದಳು. ಮಹಿಳೆ ಆತನಿಗೆ ನೀಡಬೇಕಾಗಿದ್ದ ಹಣವನ್ನು ನೀಡದೆ ವಂಚನೆ ಮಾಡಿದ್ದಾಳೆ. ಈ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಮಹಿಳೆ ಆರೋಪಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾಳೆ. ಇದರಿಂದ ಕೋಪಗೊಂಡಿದ್ದ ಆರೋಪಿ ಆಕೆಯನ್ನು ಇರಿದು ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯ ಪುಷ್ ಅಪ್ ಚಾಲೆಂಜ್ ಸ್ವೀಕರಿಸಿದ ರಾಹುಲ್ ಗಾಂಧಿ