Select Your Language

Notifications

webdunia
webdunia
webdunia
webdunia

ಮಕ್ಕಾ ಮಸೀದಿ ಸ್ಪೋಟ ಪ್ರಕರಣಕದಲ್ಲಿ ಮರುತನಿಖೆ ನಡೆಸುವಂತೆ ಕೇಂದ್ರಕ್ಕೆ ಆಗ್ರಹಿಸುವಂತೆ ತಿಳಿಸಿದ್ದೇನೆ- ಅಸಾದುದ್ದೀನ್ ಒವೈಸಿ

ಮಕ್ಕಾ ಮಸೀದಿ ಸ್ಪೋಟ ಪ್ರಕರಣಕದಲ್ಲಿ ಮರುತನಿಖೆ ನಡೆಸುವಂತೆ ಕೇಂದ್ರಕ್ಕೆ ಆಗ್ರಹಿಸುವಂತೆ ತಿಳಿಸಿದ್ದೇನೆ- ಅಸಾದುದ್ದೀನ್ ಒವೈಸಿ
ಹೈದರಾಬಾದ್ , ಶುಕ್ರವಾರ, 20 ಏಪ್ರಿಲ್ 2018 (16:41 IST)
ಹೈದರಾಬಾದ್ : ಮಕ್ಕಾ ಮಸೀದಿ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿರುವ ಹಿನ್ನಲೆಯಲ್ಲಿ ಇದೀಗ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಈ ಪ್ರಕರಣವನ್ನು ಮರುವಿಚಾರಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.


ನ್ಯಾಯಾಲಯದ ತೀರ್ಪಿನಿಂದ ಅಸಾಮಾಧಾನಗೊಂಡಿರುವ ಅಸಾದುದ್ದೀನ್ ಒವೈಸಿ ಈ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಉವೈಸಿ, ‘ಈ ಕುರಿತು ತಾನು ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಅವರನ್ನು ಭೇಟಿಯಾಗಿ ಪ್ರಕರಣದ ವಾಸ್ತವಾಂಶಗಳನ್ನು ತಿಳಿಸುತ್ತೇನೆ. ಕ್ರಿಮಿನಲ್ ಕೋಟ್ ಪ್ರೊಸಿಜರ್ ಅಡಿಯಲ್ಲಿ ಪ್ರಕರಣದ ಮರುತನಿಖೆಯನ್ನು ನಡೆಸಬಹುದಾಗಿದೆ. ನಾನು ಈಗಾಗಲೇ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಹಾಗೂ ಉಪಮುಖ್ಯಮಂತ್ರಿ ಜೊತೆ ಮಾತನಾಡಿ ಈ ಪ್ರಕರಣದಲ್ಲಿ ಮರುತನಿಖೆ ನಡೆಸುವಂತೆ ಕೇಂದ್ರಕ್ಕೆ ಆಗ್ರಹಿಸುವಂತೆ ತಿಳಿಸಿದ್ದೇನೆ’ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ತೊರೆದು ಜೆಡಿಎಸ್ ಗೆ ಸೇರ್ಪಡೆಗೊಂಡ ನಟ ಶಶಿಕುಮಾರ್