ಮದುವೆಯಾಗಿ 2 ವರ್ಷವಾಯ್ತು ಪತಿ ಟಚ್ ಕೂಡಾ ಮಾಡಿಲ್ಲ...ಆ ನಂತರ ಏನಾಯ್ತು ಗೊತ್ತಾ.?

ಗುರುವಾರ, 20 ಜೂನ್ 2019 (17:19 IST)
ಮದುವೆಯಾಗಿ ಪತಿಯೊಂದಿಗೆ ಸುಂದರವಾದ ಸಂಸಾರ ಮಾಡುವ ಕೋಟಿ ಕೋಟಿ ಕನಸುಗಳೊಂದಿಗೆ ವಿವಾಹವಾಗಿದ್ದಳು. ಪತಿ ಮಕ್ಕಳೊಂದಿಗೆ ಸುಖ ಸಂಸಾರ ನಡೆಸಬೇಕು ಎನ್ನುವುದೇ ಆಕೆಯ ಸುಂದರ ಆಶಯವಾಗಿತ್ತು. ಆದರೆ, ವಿವಾಹವಾದ ಪತಿ ನಪುಂಸಕ ಎಂದು ತಿಳಿದ ನಂತರ ಪಾತಾಳಕ್ಕೆ ಕುಸಿದಿದ್ದಳು.
ನನ್ನ ನಪುಂಸಕತನವನ್ನು ಯಾರ ಮುಂದೆಯೂ ಹೇಳಬೇಡ ಎಂದು ಪತಿ ಮನವಿ ಮಾಡಿದ್ದರಿಂದ ನೋವನ್ನು ಮನಸ್ಸಿನಲ್ಲಿ ಅದುಮಿಟ್ಟುಕೊಂಡಿದ್ದಳು. ಆದರೆ, ಪತಿ ಚಿತ್ರಹಿಂಸೆ ನೀಡುತ್ತಿರುವಾಗ ಮಾತ್ರ ಆಕೆಗೆ ತಡೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಮುಂದೆ ಪತಿಯ ರಹಸ್ಯವನ್ನು ಸ್ಫೋಟಿಸಬೇಕು ಎನ್ನುವ ಆಕ್ರೋಶ ಕಾಡುತ್ತಿತ್ತು. ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯ ಪೊಕಾಲ್‌ ಪಟ್ಟಣದಲ್ಲಿ ಈ ಘಟನೆ ವರದಿಯಾಗಿದೆ. 
 
ಪೊಕಾಲ್ ಪಟ್ಟಣದ ದಾಮಲಚೆರುವು ಪಂಚಾಯತಿ ವ್ಯಾಪ್ತಿಗೆ ಸೇರಿರುವ ಮರೆವು ಪಲ್ಲೆಕು ನಿವಾಸಿಯಾಗಿರುವ ರಾಜೇಂದ್ರ ನಾಯ್ಡು ಮತ್ತು ಉಷಾರಾಣಿ ದಂಪತಿಯ ಮಗಳೇ ಈ ದೀಪಿಕಾ.ಎಂಬಿಎ ಪದವೀಧರೆಯಾಗಿದ್ದಳು. ಚಿತ್ತೂರ್ ಜಿಲ್ಲೆಯ ರಾಮನಗರ ಕಾಲೋನಿಯ ನಿವಾಸಿಯಾಗಿರುವ ಗೋವಿಂದ್ ಸ್ವಾಮಿ ನಾಯ್ಡು ಪುತ್ರ ಶಾಮ್‌ಪ್ರಸಾದ್ ನಾಯ್ಡುನೊಂದಿಗೆ 2017 ಅಗಸ್ಟ್ 13 ರಂದು ವಿವಾಹವಾಗಿತ್ತು. 
 
ಪತಿ ಶಾಮ್‌ಪ್ರಸಾದ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಉದ್ಯೋಗಿ. ದೀಪಿಕಾ ಕೂಡಾ ಬೆಂಗಳೂರಿನಲ್ಲಿಯೇ ಉದ್ಯೋಗಿಯಾಗಿದ್ದಳು. ಇಬ್ಬರು ಇಷ್ಟಪಟ್ಟು ವಿವಾಹವಾಗಿದ್ದರು. ವಿವಾಹವಾದ ಒಂದೇ ವಾರದಲ್ಲಿ ಪತಿ ನಪುಂಸಕ ಎನ್ನುವ ಅನುಮಾನ ದೀಪಿಕಾಗೆ ಕಾಡುತ್ತಿತ್ತು.ಯಾಕೆಂದರೆ ಒಂದು ಬಾರಿ ಕೂಡಾ ಆಕೆಯನ್ನು ಟಚ್ ಮಾಡಿರಲಿಲ್ಲ.
 
ಮೊದಲ ರಾತ್ರಿಯಂದು ದೀಪಿಕಾ ತನ್ನ ಪತಿ ತನ್ನೊಂದಿಗೆ ಲೈಂಗಿಕ ಕ್ರಿಯೆ ನಡೆಸುತ್ತಾನೆ ಎನ್ನುವ ಸಂತೋಷದಲ್ಲಿದ್ದಳು. ಆದರೆ, ರಾತ್ರಿ ಪತಿ ಮಾತ್ರ ತನ್ನ ಪಾಡಿಗೆ ತಾನು ನಿದ್ದೆಗೆ ಶರಣುಹೋಗಿದ್ದ. ಇದರಿಂದ ಆಕೆಗೆ ಆಕಾಶವೇ ಕುಸಿದು ಬಿದ್ದಂತಾಗಿತ್ತು. 
 
ಪುತ್ರ ನಪುಂಸಕ ಎನ್ನುವ ಬಗ್ಗೆ ಎಲ್ಲಿಯೂ ಹೇಳಬೇಡ ಎಂದು ಅತ್ತೆ, ಮಾವ, ಪತಿ ದುಂಬಾಲು ಬಿದ್ದಿದ್ದರು. ಮನೆಯ ಮರ್ಯಾದೆ ಹೋಗಬಾರದು ಎನ್ನುವ ಕಾರಣಕ್ಕೆ ದೀಪಿಕಾ ಮೌನಕ್ಕೆ ಶರಣುಹೋಗಿದ್ದಳು. ಆದರೆ, ಪತಿ ಯಾವಾಗ ತವರು ಮನೆಯಿಂದ ಹಣ ತರುವಂತೆ ಪೀಡಿಸಿ ಚಿತ್ರಹಿಂಸೆ ನೀಡಿದನೋ ಆವಾಗ ಆಕೆಯ ತಾಳ್ಮೆ ಕಟ್ಟೆ ಒಡೆದು ಹೋಯಿತು.
 
ದೀಪಿಕಾ ತನ್ನ ತಂದೆ ತಾಯಿಗೆ ಪತಿ ಮತ್ತು ಆತನ ಕುಟುಂಬದವರ ಇತಿಹಾಸವನ್ನು ಬಯಲಿಗಿಟ್ಟಳು. ದೀಪಿಕಾ ತಂದೆ ತಾಯಿ ಬೆಂಗಳೂರಿಗೆ ಬಂದು ಅಳಿಯ ಮತ್ತು ಆತನ ಕುಟುಂಬದವರ ವಿರುದ್ಧ ಪೊಲೀಸ್ ಕೇಸ್ ದಾಖಲಿಸಿದರು. ಆರೋಪಿ ಪತಿ ಶಾಮ್‌ಪ್ರಸಾದ್‌ನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹೆಚ್.ವಿಶ್ವನಾಥ್ ಗೆ ಪತ್ರ ಬರೆದೋರಾರು?