Select Your Language

Notifications

webdunia
webdunia
webdunia
webdunia

ಲಿಫ್ಟ್ ಕುಸಿತದಿಂದ ಸಾಕಷ್ಟು ಮಂದಿ ಸಾವು!

ಲಿಫ್ಟ್ ಕುಸಿತದಿಂದ ಸಾಕಷ್ಟು ಮಂದಿ ಸಾವು!
ಅಹಮದಾಬಾದ್ , ಗುರುವಾರ, 15 ಸೆಪ್ಟಂಬರ್ 2022 (10:33 IST)
ಗಾಂಧೀನಗರ : ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಕುಸಿದು 7 ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ಬುಧವಾರ ಸಂಭವಿಸಿದೆ.

ಘಟನೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಗುಜರಾತ್ ವಿಶ್ವವಿದ್ಯಾನಿಲಯದ ಬಳಿ ಸುಮಾರು 10 ಗಂಟೆಯ ವೇಳೆಗೆ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡದ ಲಿಫ್ಟ್ ಕುಸಿದಿದೆ.

ಲಿಫ್ಟ್ ಕುಸಿತದ ವೇಳೆ ಅದರಲ್ಲಿ 8 ಕಾರ್ಮಿಕರಿದ್ದರು ಎನ್ನಲಾಗಿದೆ. ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಎಎಂಸಿ)ಯ ಅಗ್ನಿಶಾಮಕ ದಳ ಅಥವಾ ತುರ್ತು ಸೇವೆಗಳ ಇಲಾಖೆಯ ಅಧಿಕಾರಿಗಳಿಗೆ ಘಟನೆಯ ಬಗ್ಗೆ ಯಾವುದೇ ಕರೆಗಳು ಬಂದಿಲ್ಲ ಎನ್ನಲಾಗಿದೆ.

ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳ ತಲುಪಿದ್ದಾರೆ ಎಂದು ತಿಳಿದುಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಬ್‌ನ್ನು ತಲೆಗೆ ಧರಿಸುತ್ತಾರೆ, ಮನಸ್ಸಿಗಲ್ಲ : ಓವೈಸಿ