Select Your Language

Notifications

webdunia
webdunia
webdunia
webdunia

ಗುಡ್ಡಕುಸಿತ : ಬೃಹತ್ ಬಂಡೆ ಉರುಳುವ ಆತಂಕ!

ನಂದಿಬೆಟ್ಟ
ಚಿಕ್ಕಬಳ್ಳಾಪುರ : ವಿಶ್ವವಿಖ್ಯಾತ ನಂದಿಗಿರಿಧಾಮದ ರಸ್ತೆಯಲ್ಲಿ ಮತ್ತೊಮ್ಮೆ ಗುಡ್ಡ ಕುಸಿತವಾಗಿದ್ದು, ಮಾರ್ಗ ಮಧ್ಯೆ ಬೃಹತ್ ಬಂಡೆಯೊಂದು ಉರುಳುವ ಆತಂಕ ಎದುರಾಗಿದೆ.
 
ಮಿರ್ಜಾ ಸರ್ಕಲ್ ಮುಂಭಾಗದ ತಿರುವಿನಲ್ಲಿ ಈ ಘಟನೆ ನಡೆದಿದೆ. ಭಾರೀ ಮಳೆಗೆ ನಂದಿಬೆಟ್ಟದಲ್ಲಿ ಗುಡ್ಡ ಕುಸಿತವಾಗಿದೆ. ಮಣ್ಣು ಹಾಗೂ ಬಂಡೆಗಳು ರಸ್ತೆಯ ಮುಕ್ಕಾಲು ಭಾಗ ಆವರಿಸಿವೆ.

ಇದೀಗ ಮತ್ತೊಂದು ಬೃಹದಾಕಾರದ ಬಂಡೆ ಸಹ ಉರುಳುವ ಆತಂಕ ಎದುರಾಗಿದೆ. ಸದ್ಯ ಆತಂಕದಲ್ಲೇ ನಂದಿಬೆಟ್ಟ ಕ್ಕೆ ವಾಹನಗಳು ಸಂಚರಿಸುತ್ತಿವೆ.

ಕಳೆದ ಜೂನ್ ತಿಂಗಳಿನಲ್ಲಿಯೂ ಭಾರೀ ಮಳೆಗೆ ಎರಡು ಕಡೆಗಳಲ್ಲಿ ಗುಡ್ಡಕುಸಿತ  ವಾಗಿತ್ತು. ಸುಲ್ತಾನಪೇಟೆ ಗ್ರಾಮದ ಕಡೆ ಎರಡು ಕಡೆ ಗುಡ್ಡಗಳು ಕುಸಿದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನಕ್ಕೆ ಅಮೆರಿಕದಿಂದ ಸೇನಾ ನೆರವು