Publish Date: Sun, 03 Jul 2022 (10:00 IST)
Updated Date: Sun, 03 Jul 2022 (09:41 IST)
ಚಿಕ್ಕಬಳ್ಳಾಪುರ : ವೀಕೆಂಡ್ನಲ್ಲಿ ಬೆಂಗಳೂರಿನ ಹಾಟ್ ಫೆವರೇಟ್ ಪಿಕ್ನಿಕ್ ಸ್ಪಾಟ್ ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ ಬೈಕ್ ಏರಿ ಬಂದ ಪ್ರವಾಸಿಗರಿಗೆ ಬೆಳ್ಳಂಬೆಳಗ್ಗೆ ಆರ್ಟಿಓ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ರಾಣಿ ಕ್ರಾಸ್ ಬಳಿ ಆರ್ಟಿಓ ಜಂಟಿ ಆಯುಕ್ತ ಕೆ.ಟಿ ಹಾಲಸ್ವಾಮಿ ನೇತೃತ್ವದಲ್ಲಿ 5 ತಂಡಗಳಲ್ಲಿ ಆರ್ಟಿಓ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 120ಕ್ಕೂ ಹೆಚ್ಚು ಬೈಕ್ ಸವಾರರಿಗೆ ದಂಡ ವಿಧಿಸಿದ್ದಾರೆ.
ಅಂದಹಾಗೆ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ ಬೇಕಾಬಿಟ್ಟಿ ರಾಜಾರೋಷವಾಗಿ ಕರ್ಕಶ ಶಬ್ಧ ಮಾಡುತ್ತಾ ಬೈಕ್ಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು ಬೈಕ್ ಸವಾರರಿಗೆ ಕ್ಲಾಸ್ ತೆಗೆದುಕೊಂಡು ದಂಡ ವಿಧಿಸಿದ್ದಾರೆ.