ಚೆನ್ನೈ: ಮನೆಯವರು ತಮ್ಮ ಸಂಬಂಧವನ್ನು ವಿರೋಧಿಸಿದರೆಂಬ ಕಾರಣಕ್ಕೆ ಯುವಕನೋರ್ವ ತನ್ನ ಪ್ರೇಯಸಿಯ ಮನೆಗೆ ಬಂದು ಆಕೆಯನ್ನು ಕೊಲೆ ಮಾಡಲೆತ್ನಿಸಿದ್ದಲ್ಲದೆ, ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರೇಯಸಿಯ ಮನೆಗೆ ಬಂದ ಯುವಕ ಆಕೆಯ ಗಂಟಲು ಸೀಳಿ ಕೊಲೆಗೆ ಯತ್ನಿಸಿದ್ದಾನೆ. ಈ ವೇಳೆ ಮನೆಯವರು ಸ್ಥಳಕ್ಕೆ ಆಗಮಿಸಿದ್ದಾರೆ.
ಆದರೆ ಮನೆಯವರನ್ನು ನೋಡಿದ ತಕ್ಷಣ ಆರೋಪಿ ಓಡಿ ಹೋಗಿ ಇನ್ನೊಂದು ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಆತ್ಮಹತ್ಯೆ ಮಾಡಲೆತ್ನಿಸಿದ್ದಾನೆ. ಬಳಿಕ ಯುವತಿ ಮನೆಯವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋಣೆಯ ಬಾಗಿಲು ಮುರಿದು ನೋಡಿದಾಗ ಯುವಕನೂ ನೇಣು ಹಾಕಿಕೊಂಡಿದ್ದ. ಸೂಕ್ತ ಸಮಯದಲ್ಲಿ ರಕ್ಷಿಸಿದ್ದರಿಂದ ಜೀವ ಉಳಿದಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!