Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ಫ್ರೆಂಡ್ ಜೊತೆ ಪ್ರೀತಿಗೆ ಬಿದ್ದ ವಿವಾಹಿತ ಯುವಕ ಆತ್ಮಹತ್ಯೆಗೆ ಶರಣು

ಫೇಸ್ ಬುಕ್ ಫ್ರೆಂಡ್ ಜೊತೆ ಪ್ರೀತಿಗೆ ಬಿದ್ದ ವಿವಾಹಿತ ಯುವಕ ಆತ್ಮಹತ್ಯೆಗೆ ಶರಣು
ಬೆಂಗಳೂರು , ಬುಧವಾರ, 10 ನವೆಂಬರ್ 2021 (09:37 IST)
ಬೆಂಗಳೂರು: ವಿವಾಹಿತ ಯುವಕನೊಬ್ಬ ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿ ಜೊತೆಗೆ ಪ್ರೀತಿಗೆ ಬಿದ್ದು, ಕೊನೆಗೆ ಆಕೆ ಪ್ರಶ್ನೆ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಚೇತನ್ ಎಂಬ 27 ವರ್ಷದ ಯುವಕನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವೂ ಇದೆ. ಕೌಟುಂಬಿಕ ಕಲಹದಿಂದಾಗಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ. ಇದೀಗ ಫೇಸ್ ಬುಕ್ ನಲ್ಲಿ ಪರಿಚಯವಾದ ಯುವತಿ ಜೊತೆ ಪ್ರೀತಿಗೆ ಬಿದ್ದಿದ್ದ.

ಆದರೆ ಚೇತನ್ ಗೆ ಮದುವೆಯಾದ ವಿಚಾರ ತಿಳಿದ ಯುವತಿ ಪ್ರಶ್ನೆ ಮಾಡಿದ್ದಾಳೆ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಬಾಲಕಿ