Select Your Language

Notifications

webdunia
webdunia
webdunia
webdunia

ಶಾಲೆಗೆ ಹೋಗುವಾಗ ನೆರೆಯವನ ಕಾಟ: ಬಾಲಕಿ ಆತ್ಮಹತ್ಯೆ

webdunia
ಲಕ್ನೋ , ಸೋಮವಾರ, 8 ನವೆಂಬರ್ 2021 (09:16 IST)
ಲಕ್ನೋ: ಶಾಲೆಗೆ ಹೋಗುವಾಗ ನೆರೆಮನೆಯಾತ ಕಿರುಕುಳ ಕೊಡುತ್ತಿದ್ದಾನೆಂದು ಮನನೊಂದು 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಬಾಲಕಿ ಶಾಲೆಗೆ ಹೋಗುವಾಗ ಪ್ರತಿನಿತ್ಯ ಎದುರಾಗುತ್ತಿದ್ದ ಆರೋಪಿ ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಇದನ್ನು ಯಾರಲ್ಲೂ ಹೇಳಿಕೊಳ್ಳಲಾಗದೇ ಬಾಲಕಿ ಒಳಗೊಳಗೇ ಹಿಂಸೆ ಅನುಭವಿಸುತ್ತಿದ್ದಳು.

ಕೊನೆಗೆ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಕ್ಷಣವೇ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಯತ್ನ