Select Your Language

Notifications

webdunia
webdunia
webdunia
webdunia

ಆಭರಣ ಖರೀದಿ ವಿಚಾರಕ್ಕೆ ಜಗಳ: ಪತ್ನಿಯನ್ನು ಕೊಂದ ಪತಿ

ಆಭರಣ ಖರೀದಿ ವಿಚಾರಕ್ಕೆ ಜಗಳ: ಪತ್ನಿಯನ್ನು ಕೊಂದ ಪತಿ
ಬೆಂಗಳೂರು , ಭಾನುವಾರ, 7 ನವೆಂಬರ್ 2021 (09:35 IST)
ಬೆಂಗಳೂರು: ಆಭರಣ ಖರೀದಿ ವಿಚಾರದಲ್ಲಿ ಪತಿ-ಪತ್ನಿಯರ ನಡುವೆ ನಡೆದ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ಸಿದ್ಧಾಪುರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬಾಡಿಗೆ ನೀಡಲೆಂದು ಮನೆಯಲ್ಲಿ ಎತ್ತಿಟ್ಟಿದ್ದ ಹಣವನ್ನು ಪತ್ನಿ ಆಭರಣ ಖರೀದಿಗೆ ಬಳಸಿದ್ದಳು. ಇದು ಪತಿಯ ಸಿಟ್ಟಿಗೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಪತಿ ಪತ್ನಿಯ ಜೊತೆ ಜಗಳವಾಡಿದ್ದ.

ಈ ಸಂದರ್ಭದಲ್ಲಿ ಪತಿ, ಪತ್ನಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದು, ಪರಿಣಾಮ ಆಕೆ ಸಾವನ್ನಪ್ಪಿದ್ದಾಳೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿಯ ಅಪಹರಣ! ಮುಂದೆ ಏನಾಯ್ತು?