Select Your Language

Notifications

webdunia
webdunia
webdunia
webdunia

ಮಾತಾಡಲು ಬಿಡದ್ದಕ್ಕೆ ಪ್ರೇಯಸಿ ತಂದೆಗೆ ಚಾಕುವಿನಿಂದ ಇರಿದ ಯುವಕ

ಮಾತಾಡಲು ಬಿಡದ್ದಕ್ಕೆ ಪ್ರೇಯಸಿ ತಂದೆಗೆ ಚಾಕುವಿನಿಂದ ಇರಿದ ಯುವಕ
ಮುಂಬೈ , ಶನಿವಾರ, 6 ನವೆಂಬರ್ 2021 (09:22 IST)
ಮುಂಬೈ: ಪ್ರೇಯಸಿ ಜೊತೆ ಮಾತನಾಡಲೂ ಅವಕಾಶ ಕೊಡದ ಆಕ್ರೋಶಕ್ಕೆ 19 ವರ್ಷದ ಯುವಕ ಆಕೆಯ ತಂದೆಗೇ ಚಾಕುವಿನಿಂದ ಇರಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಅನಗತ್ಯವಾಗಿ ಮಗಳಿಗೆ ಕರೆ ಮಾಡಿ ಕಿರುಕುಳ ಕೊಡುತ್ತಿದ್ದ ಬಗ್ಗೆ ಆಕೆಯೇ ತಂದೆಗೆ ದೂರು ನೀಡಿದ್ದಳು. ಇದರ ಬಗ್ಗೆ ತಂದೆ ಯುವಕನಿಗೆ ಎಚ್ಚರಿಕೆ ನೀಡಿದ್ದರು.

ಇದರಿಂದ ಆಕ್ರೋಶಗೊಂಡ ಆರೋಪಿ ಯುವಕ, ಪ್ರೇಯಸಿಯ ತಂದೆ ತಮ್ಮ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಬಂದು ಚಾಕುವನಿಂದ ಇರಿದಿದ್ದಾನೆ. ಸ್ಥಳೀಯರ ಕೈಗೆ ಸಿಕ್ಕಿಹಾಕಿಕೊಳ್ಳುವ ಮೊದಲೇ ಆತ ಘಟನಾ ಸ್ಥಳದಿಂದ ತಪ್ಪಿಸಿಕೊಂಡಿದ್ದಾನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಟಾಕಿಯಿಂದ ಸಜೀವ ದಹನವಾದ್ರು ಅಪ್ಪ-ಮಗ