ಲಕ್ನೋ: ಮಕ್ಕಳು ಪಟಾಕಿ ಸಿಡಿಸಿದ್ದರಿಂದ ಆಕ್ರೋಶಗೊಂಡ ವ್ಯಕ್ತಿಯೊಬ್ಬ ಆವೇಶದ ಭರದಲ್ಲಿ ನೆರೆಮನೆಯ ಇಬ್ಬರು ಮಹಿಳೆಯರ ಮೇಲೆ ಆಸಿಡ್ ಎರಚಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮಕ್ಕಳು ಪಟಾಕಿ ಸಿಡಿಸುತ್ತಿದ್ದಾಗ ಕಿರಿ ಕಿರಿಯಾಗಿ ಅವರಲ್ಲಿ ನಿಲ್ಲಿಸಲು ಆರೋಪಿ ಹೇಳಿದ್ದ. ಆದರೆ ಅವರು ನಿಲ್ಲಿಸದೇ ಹೋದಾಗ ಓರ್ವ ಬಾಲಕನಿಗೆ ಹೊಡೆದಿದ್ದಾನೆ.
ಇದೇ ವಿಚಾರವಾಗಿ ನೆರೆಮನೆಯವರ ಜೊತೆ ಭಾರೀ ಕಿತ್ತಾಟವಾಗಿದೆ. ಇದೇ ಆವೇಶದಲ್ಲಿ ಆರೋಪಿ ಇಬ್ಬರು ಮಹಿಳೆಯರ ಮೇಲೆ ಆಸಿಡ್ ಎರಚಿದ್ದಾನೆ. ಇದೀಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!