Select Your Language

Notifications

webdunia
webdunia
webdunia
webdunia

ಪತ್ನಿಯ ಕಾಟ ತಾಳಲಾರದೆ ಹತ್ಯೆಯಾಗಿರುವುದಾಗಿ ನಾಟಕವಾಡಿದ ಪತಿರಾಯ!

ಅಪರಾಧ ಸುದ್ದಿಗಳು
ನವದೆಹಲಿ , ಶನಿವಾರ, 2 ಜನವರಿ 2021 (10:33 IST)
ನವದೆಹಲಿ: ಪತ್ನಿಯ ಕಾಟ ತಾಳಲಾರದೇ ವ್ಯಕ್ತಿಯೊಬ್ಬ ತಾನು ಹತ್ಯೆಯಾಗಿರುವುದಾಗಿ ನಾಟಕವಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಬಿಹಾರದಲ್ಲಿ ನಡೆದಿದೆ.


ಬಿಹಾರದ ಪ್ರದೀಪ್ ಕುಮಾರ್ ರಾಮ್ ಎಂಬಾತ ಈ ಕೃತ್ಯ ನಡೆಸಿದವರು. ಈತನ ಪತ್ನಿ ಪ್ರತಿಭಾ ಶಾಲಾ ಶಿಕ್ಷಕಿ. ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಕಿತ್ತಾಟ ನಡೆಯುತ್ತಿತ್ತು ಎನ್ನಲಾಗಿದೆ. ಇತ್ತೀಚೆಗೆ ಪ್ರದೀಪ್ ತಮ್ಮ ನಿರ್ಮಾಣ ಹಂತದಲ್ಲಿರುವ ಮನೆಗೆ ತೆರಳಿ ರಾತ್ರಿ ಕಳೆದಿದ್ದರು. ಬೆಳಗಿನ ಹೊತ್ತಿಗೆ ಪತ್ನಿ ಅಲ್ಲಿಗೆ ಬಂದು ನೋಡಿದಾಗ ಅಲ್ಲೆಲ್ಲಾ ರಕ್ತದ ಕಲೆಯಿತ್ತು. ಆದರೆ ಪ್ರದೀಪ್ ಮೃತದೇಹ ಸಿಕ್ಕಿರಲಿಲ್ಲ. ಹೀಗಾಗಿ ಪ್ರತಿಭಾ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಘಟನಾ ಸ್ಥಳದಲ್ಲಿ ಪರಿಶೀಲಿಸಿದಾಗ ಅವರ ಮನೆಯ ಸಮೀಪದಲ್ಲೇ ಖಾಲಿ ರಕ್ತದ ಬಾಟಲ್ ಒಂದು ಸಿಕ್ಕಿತ್ತು. ಇದರಿಂದ ಪೊಲೀಸರ ಅನುಮಾನ ಹೆಚ್ಚಿತ್ತು. ಇದೇ ವೇಳೆ ನೆರೆಯ ಉತ್ತರಪ್ರದೇಶದಲ್ಲಿ ಪ್ರದೀಪ್ ಪತ್ತೆಯಾಗಿದ್ದರು. ಹೀಗಾಗಿ ಪ್ರದೀಪ್ ಸಾವಿನ ನಾಟಕ ಬಯಲಾಯಿತು.

Share this Story:

Follow Webdunia kannada

ಮುಂದಿನ ಸುದ್ದಿ

ತೋಳದ ಮುಖವಾಡ ಹಾಕಿ ಬೀದಿಯಲ್ಲಿ ನಡೆದಿದ್ದಕ್ಕೆ ವ್ಯಕ್ತಿ ಅರೆಸ್ಟ್!