Publish Date: Sat, 02 Jan 2021 (09:43 IST)
Updated Date: Sat, 02 Jan 2021 (09:46 IST)
ಬೆಂಗಳೂರು: ಖ್ಯಾತ ಸ್ತ್ರೀ ರೋಗ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅಶ್ಲೀಲ ಫೋಟೋಗಳನ್ನು ಪ್ರಕಟಿಸಿ ಕಿಡಿಗೇಡಿಗಳು ದುಷ್ಕೃತ್ಯ ನಡೆಸಿದ್ದಾರೆ.
ಪದ್ಮಿನಿ ಪ್ರಸಾದ್ ಅವರ ಫೋಟೋವನ್ನು ಡಿಪಿಯಾಗಿ ಬಳಸಿರುವ ದುಷ್ಕರ್ಮಿಗಳು ಮಹಿಳೆಯರನ್ನು ಟಾರ್ಗೆಟ್ ಮಾಡಿ ವೈಯಕ್ತಿಕ ಸಮಸ್ಯೆಗಳಿದ್ದರೆ ಮೆಸೇಜ್ ಮಾಡಿ ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಪದ್ಮಿನಿ ಪ್ರಸಾದ್ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಯಾರಿಗೂ ಸಾಮಾಜಿಕ ಜಾಲತಾಣ ಮೂಲಕ ಸಂದೇಶ ನೀಡಿಲ್ಲ. ಇದು ನಕಲಿ ಖಾತೆ. ಇದನ್ನು ನಂಬಿ ಮೋಸಹೋಗಬೇಡಿ ಎಂದು ಮನವಿ ಮಾಡಿದ್ದಾರೆ.