Publish Date: Mon, 04 Apr 2022 (10:00 IST)
Updated Date: Mon, 04 Apr 2022 (10:09 IST)
ರಾಂಚಿ: ಮೂರನೇ ಮದುವೆಯಾಗಲು ಹೊರಟ ಬಾವನನ್ನು ಬಾಮೈದನೇ ಕೊಲೆ ಮಾಡಿದ ಘಟನೆ ನಡೆದಿದೆ.
ಈ ಸಂಬಂಧ ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾವಿಯೊಂದರಲ್ಲಿ ಮೃತದೇಹದ ಅವಶೇಷಗಳು ಪತ್ತೆಯಾಗಿತ್ತು.
ಪೊಲೀಸರು ಸ್ಥಳೀಯರ ಹೇಳಿಕೆ ಆಧಾರದಿಂದ ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಕೊಲೆಗೆ ಬಾಮೈದನ ಜೊತೆ ಇನ್ನೂ ಮೂವರು ಸಹಕರಿಸಿದ್ದರು. ಎಲ್ಲಾ ಆರೋಪಿಗಳನ್ನು ಇದೀಗ ಬಂಧಿಸಲಾಗಿದೆ.