Publish Date: Sun, 06 Sep 2020 (10:41 IST)
Updated Date: Sun, 06 Sep 2020 (10:43 IST)
ನವದೆಹಲಿ: ವೈವಾಹಿಕ ಅಂಕಣದ ಮೂಲಕ ಅದೆಷ್ಟೋ ಮಂದಿ ವಂಚನೆಗೊಳಗಾಗುವ ಸುದ್ದಿ ಕೇಳಿರುತ್ತೇವೆ. ಈಗ ಅಂತಹದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.
ಮಹಿಳೆಯೊಬ್ಬರಿಗೆ ವ್ಯಕ್ತಿಯೊಬ್ಬ ವೈವಾಹಿಕ ಅಂಕಣದ ಮೂಲಕ ಪರಿಚಿತನಾಗಿದ್ದು, ಮದುವೆಯಾಗುವುದಾಗಿ ನಂಬಿಸಿ 1 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿ ವಂಚಿಸಿದ್ದಾನೆ. ಮದುವೆಗೆ ಮೊದಲು ನನಗೆ ಸ್ವಲ್ಪ ಹಣ ಬೇಕಾಗಿದೆ. ಆ ಬಳಿಕ ಮದುವೆ ಮಾಡಿಕೊಳ್ಳುತ್ತೇನೆ ಎಂದು ಮಹಿಳೆಯನ್ನು ನಂಬಿಸಿದ್ದಾನೆ. ಇದನ್ನು ನಂಬಿದ ಮಹಿಳೆ ಹಣ ನೀಡಿದ್ದಾಳೆ. ಆದರೆ ಹಣ ಪಡೆದ ಬಳಿಕ ಆರೋಪಿ ಪದೇ ಪದೇ ಕಾಲ್ ಮಾಡಿದರೂ ರಿಸೀವ್ ಮಾಡದೇ ಇದ್ದಾಗ ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.