Select Your Language

Notifications

webdunia
webdunia
webdunia
webdunia

ಬೆಡ್ ರೂಂನಲ್ಲಿ ಸಿಸಿಟಿವಿ ಅಳವಡಿಸಿದ ಪತಿ: ಬೇಸತ್ತ ಪತ್ನಿ ಮಾಡಿದ್ದೇನು ಗೊತ್ತಾ?!

ಬೆಡ್ ರೂಂನಲ್ಲಿ ಸಿಸಿಟಿವಿ ಅಳವಡಿಸಿದ ಪತಿ: ಬೇಸತ್ತ ಪತ್ನಿ ಮಾಡಿದ್ದೇನು ಗೊತ್ತಾ?!
ಮುಂಬೈ , ಮಂಗಳವಾರ, 15 ಸೆಪ್ಟಂಬರ್ 2020 (13:08 IST)
ಮುಂಬೈ: ತನ್ನ ನಡತೆ ಮೇಲೆ ಅನುಮಾನ ಹೊಂದಿದ್ದ ಪತಿ ಬೆಡ್ ರೂಂನಲ್ಲೇ ಸಿಸಿಟಿವಿ ಅಳವಡಿಸಿ ಇರಿಸುಮುರಿಸು ತಂದ ಪರಿಣಾಮ ಪತ್ನಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ.


ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪತಿ ನಿವೃತ್ತ ಸೇನಾಧಿಕಾರಿ ಎನ್ನಲಾಗಿದೆ. ಈತ ಪತ್ನಿಯ ಮೇಲೆ ಅನುಮಾನದಿಂದ ಬೆಡ್ ರೂಂನಲ್ಲಿ ಸಿಸಿಟಿವಿ ಅಳವಡಿಸಿ ಆಕೆಯ ಚಲನವಲನಗಳ ಮೇಲೆ ನಿಗಾ ವಹಿಸಿದ್ದ. ಇದರಿಂದಾಗಿ ಪತ್ನಿ ಮತ್ತು ಮಗಳಿಗೆ ಇರಿಸುಮುರಿಸಾಗಿತ್ತು. ಹೀಗಾಗಿ ಸಿಸಿಟಿವಿ ತೆಗೆಯುವಂತೆ ಪತಿಗೆ ಮನವಿ ಮಾಡಿದರೂ ಕಿವಿಗೊಡದ ಆತ ಹಲ್ಲೆ ನಡೆಸಿದ್ದಾನೆ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಲು ಹೋದಾಗ ಅವರು ದೂರು ಸ್ವೀಕರಿಸಲಿಲ್ಲ. ಹೀಗಾಗಿ ಮಹಿಳೆ ನೇರವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ನ್ಯಾಯಾಲಯ ಪತಿಗೆ ಸಿಸಿಟಿವಿ ತೆಗೆದು ಹಾಕಲು ಆದೇಶಿಸಿದ್ದಲ್ಲದೆ, ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಕ್ಕೆ ಪತ್ನಿ 40 ಸಾವಿರ ರೂ.ಗಳ ದಂಡ ನೀಡುವಂತೆ ಆದೇಶಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಈ ವ್ಯಕ್ತಿ ಮಾಡಿದ್ದೇನು ಗೊತ್ತಾ?