Select Your Language

Notifications

webdunia
webdunia
webdunia
webdunia

ಮೋದಿಗೆ ವೋಟ್ ಹಾಕಿದ್ರೆ ಸಿಲಿಂಡರ್ ಗೆ 2000 ರೂ. ಆಗುತ್ತದೆ: ಮಮತಾ ಬ್ಯಾನರ್ಜಿ

Mamatha Banerji

Krishnaveni K

ಕೋಲ್ಕೊತ್ತಾ , ಶುಕ್ರವಾರ, 1 ಮಾರ್ಚ್ 2024 (10:45 IST)
ಕೋಲ್ಕೊತ್ತಾ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ವೋಟ್ ಹಾಕಿದ್ರೆ ಎಲ್ ಪಿಜಿ ಸಿಲಿಂಡರ್ ಬೆಲೆ 2000 ರೂ.ಗೆ ತಲುಪಲಿದೆ ಎಂದು ಪಶ್ಚಿಮ ಬಂಗಾಲ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
 

ಬಂಗಾಳದ ಝಾರ್ ಗ್ರಾಮ್ ನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಜನ ಮತ್ತೆ ಹಳೆಯ ಕಾಲದಂತೆ ಕಟ್ಟಿಗೆ ಸಂಗ್ರಹಿಸಲು ಹೋಗಬೇಕಾಗುತ್ತದೆ ಎಂದಿದ್ದಾರೆ.

‘ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅವರು ಸಿಲಿಂಡರ್ ಬೆಲೆಯನ್ನು 1500 ಅಥವಾ 2000 ರೂ.ಗೆ ಏರಿಕೆ ಮಾಡಲಿದೆ. ಹಾಗಾದಲ್ಲಿ ಮತ್ತೆ ನಾವು ನಮ್ಮ ಹಳೆಯ ಕಾಲದಂತೆ ಕಾಡಿಗೆ ಹೋಗಿ ಕಟ್ಟಿಗೆ ಸಂಗ್ರಹಿಸುವ ಕೆಲಸ ಮಾಡಬೇಕಾಗಬಹುದು’ ಎಂದು ವ್ಯಂಗ್ಯ ಮಾಡಿದ್ದಾರೆ. ಅಲ್ಲದೆ, ಒಂದು ವೇಳೆ ಕೇಂದ್ರ ಸರ್ಕಾರ ಆವಾಸ್ ಯೋಜನೆಯಡಿ ಏಪ್ರಿಲ್ ಅಂತ್ಯದೊಳಗಾಗಿ ಮನೆ ಕಟ್ಟಿಕೊಡದಿದ್ದರೆ ಬಂಗಾಲ ಸರ್ಕಾರವೇ ಆ ಕೆಲಸ ಮಾಡಲಿದೆ ಎಂದಿದ್ದಾರೆ.

ಅಲ್ಲದೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನರೇಗಾ ಯೋಜನೆಯಡಿ ಪಾವತಿಸಬೇಕಾದ ಹಣವನ್ನು ಪಾವತಿಸಿಲ್ಲ. ನಾನು ಈ ಬಗ್ಗೆ ಯುವಕನನ್ನು ಕೇಳಿದ್ದೆ.  ಇದೇ ರೀತಿ ಕೇಂದ್ರ ಸರ್ಕಾರ ಅನೇಕರಿಗೆ ಪೂರ್ತಿ ಹಣ ನೀಡದೇ ವಂಚಿಸಿದೆ ಎಂದು ಮಮತಾ ಆರೋಪಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರಿಸಲು ಬಿಡದ ಮಗನ ಉಸಿರನ್ನೇ ನಿಲ್ಲಿಸಿದ ತಂದೆ