Select Your Language

Notifications

webdunia
webdunia
webdunia
webdunia

ಭಾರತದ ಟಾಪ್ 100 ಪ್ರಭಾವಿ ವ್ಯಕ್ತಿಗಳ ಲಿಸ್ಟ್ ನಲ್ಲಿ ಮೋದಿ ನಂ.1

PM Modi

Krishnaveni K

ನವದೆಹಲಿ , ಗುರುವಾರ, 29 ಫೆಬ್ರವರಿ 2024 (12:47 IST)
Photo Courtesy: Twitter
ನವದೆಹಲಿ: ಇಂಡಿಯನ್ ಎಕ್ಸ್ ಪ್ರೆಸ್‍ ಬಿಡುಗಡೆಗೊಳಿಸಿದ ದೇಶದ ಅಗ್ರ 100 ಪ್ರಭಾವಿ ವ್ಯಕ್ತಿಗಳ ಲಿಸ್ಟ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ನಂ.1 ಸ್ಥಾನ ಪಡೆದಿದ್ದಾರೆ.

ಇನ್ನೇನು ಲೋಕಸಭೆ ಚುನಾವಣೆ ಬರಲಿದ್ದು, ಇದಕ್ಕೆ ಮೊದಲು ಪ್ರಭಾವಿ ವ್ಯಕ್ತಿಗಳ ಪಟ್ಟಿ ಬಿಡುಗಡೆಗೊಂಡಿದೆ. ಈ ಪಟ್ಟಿಯಲ್ಲಿ ಕೇವಲ ರಾಜಕಾರಣಿಗಳು ಮಾತ್ರವಲ್ಲ, ಸಿನಿಮಾ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರೂ ಸೇರಿದ್ದಾರೆ. ಈ ಪಟ್ಟಿಯಲ್ಲಿ ಪ್ರಧಾನಿ ಮೋದಿ ಮೊದಲ ಸ್ಥಾನದಲ್ಲಿದ್ದರೆ, ಗೃಹ ಸಚಿವ ಅಮಿತ್ ಶಾ, ವಿರಾಟ್ ಕೊಹ್ಲಿ, ರಾಹುಲ್ ಗಾಂಧಿ, ಉದ್ಯಮಿ ಗೌತಮ್ ಅದಾನಿ ಮುಂತಾದವರು ಸ್ಥಾನ ಪಡೆದಿದ್ದಾರೆ.

ಟಾಪ್ 10 ಪಟ್ಟಿಯಲ್ಲಿ ಮೋದಿ ಜೊತೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಗೌತಮ್ ಅದಾನಿ ಮುಂತಾದವರು ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 16 ನೇ ಸ್ಥಾನದಲ್ಲಿದ್ದಾರೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 18 ನೇ ಸ್ಥಾನದಲ್ಲಿದ್ದಾರೆ. ಇವರು ಮಾತ್ರವಲ್ಲದೆ, ಆರ್ ಎಸ್ ಎಸ್ ಸಂಚಾಲಕ ಮೋಹನ್ ಭಾಗವತ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮುಂತಾದವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣದಲ್ಲೂ ಜಗತ್ತಿನ ಯಾವುದೇ ನಾಯಕನಿಗೂ ಇಲ್ಲದಷ್ಟು ಹಿಂಬಾಲಕರನ್ನು ಹೊಂದಿದ್ದಾರೆ. ಎಕ್ಸ್ ನಲ್ಲಿ ಅವರಿಗೆ 95.6 ಮಿಲಿಯನ್ ಅನುಯಾಯಿಗಳಿದ್ದಾರೆ.   

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ, ಕಾಂಗ್ರೆಸ್ ನಲ್ಲಿ ಯಾವ ಪಾರ್ಟಿಗೆ ಈ ವರ್ಷ ಹೆಚ್ಚು ಆದಾಯ ವಿವರ ಇಲ್ಲಿದೆ