Select Your Language

Notifications

webdunia
webdunia
webdunia
webdunia

Mamata Banerjee:ಪಾಕಿಸ್ತಾನ ವಿರುದ್ಧ ವಿಶ್ವಕ್ಕೆ ಮನವರಿಕೆ ಮಾಡಲು ನಮ್ಮ ಸಂಸದರನ್ನು ಕಳಿಸಲ್ಲ ಎಂದ ಮಮತಾ ಬ್ಯಾನರ್ಜಿ

Mamata Banerjee

Krishnaveni K

ನವದೆಹಲಿ , ಸೋಮವಾರ, 19 ಮೇ 2025 (11:45 IST)
ನವದೆಹಲಿ: ಕೇಂದ್ರ ಸರ್ಕಾರ ಪಾಕಿಸ್ತಾನದ ಉಗ್ರ ಪೋಷಣೆ ಬಗ್ಗೆ ವಿಶ್ವಕ್ಕೇ ಮನವರಿಕೆ ಮಾಡಲು ಸರ್ವಪಕ್ಷಗಳ ನಿಯೋಗ ರಚಿಸಿದೆ. ಈ ನಿಯೋಗ ಹಲವು ದೇಶಗಳಿಗೆ ಪ್ರವಾಸ ಮಾಡಲಿದೆ. ಆದರೆ ಈ ನಿಯೋಗದಲ್ಲಿ ನಮ್ಮ ಸಂಸದರನ್ನು ಕಳುಹಿಸಲ್ಲ ಎಂದು ಟಿಎಂಸಿ ನಾಯಕಿ, ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಟಿಎಂಸಿಯಿಂದ ಸಂಸದ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ರನ್ನು ಕೇಂದ್ರ ಸರ್ಕಾರ ಅಯ್ಕೆ ಮಾಡಿತ್ತು. ಇದಕ್ಕೆ ನಮ್ಮ ಸಹಮತಿಯಿಲ್ಲ. ಯಾವುದೇ ಪಕ್ಷದ ಅನುಮತಿಯಿಲ್ಲದೇ ಆ ಪಕ್ಷದ ಸಂಸದರನ್ನು ಆಯ್ಕೆ ಮಾಡುವುದನ್ನು ನಾವು ಒಪ್ಪುವುದಿಲ್ಲ. ಈ ಕಾರಣಕ್ಕೆ ಕೇಂದ್ರ ಸರ್ಕಾರದ ಸರ್ವಪಕ್ಷ ನಿಯೋಗದಲ್ಲಿ ನಮ್ಮ ಸಂಸದರನ್ನು ಕಳುಹಿಸಲ್ಲ ಎಂದು ಮಮತಾ ಕುಂಟು ನೆಪ ಹೇಳಿದ್ದಾರೆ.

ಈಗಾಗಲೇ ಕಾಂಗ್ರೆಸ್ ನಿಂದ ಶಶಿ ತರೂರ್ ಹೆಸರನ್ನು ಕೇಂದ್ರ ಸರ್ಕಾರವೇ ಆಯ್ಕೆ ಮಾಡಿತ್ತು. ಇದೂ ಕೂಡಾ ಕಾಂಗ್ರೆಸ್ ಅಸಮಧಾನಕ್ಕೆ ಗುರಿಯಾಗಿತ್ತು. ಆದರೆ ಬಳಿಕ ತರೂರ್ ಆಯ್ಕೆಯನ್ನು ಸಮ್ಮಿತಿಸಿತ್ತು.

ಹಲವು ಸಂಸದರನ್ನು ಒಳಗೊಂಡ ಸರ್ವಪಕ್ಷ ನಿಯೋಗ ದೇಶ ದೇಶಗಳಿಗೆ ಹೋಗಿ ಪಾಕಿಸ್ತಾನ ಉಗ್ರವಾದಕ್ಕೆ ನೀಡುತ್ತಿರುವ ಪ್ರೋತ್ಸಾಹದ ಕುರಿತು ಮನದಟ್ಟು ಮಾಡಲು ಕೇಂದ್ರ ಸರ್ಕಾರ ಯೋಜನೆ ಹಾಕಿದೆ. ಆದರೆ ಈ ನಿಯೋಗಕ್ಕೆ ಟಿಎಂಸಿ ಬೆಂಬಲ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

Pakistan: ಉಗ್ರ ಸೈಫುಲ್ಲಾ ಮೃತದೇಹಕ್ಕೆ ರಾಷ್ಟ್ರಧ್ವಜ: ಪಾಕಿಸ್ತಾನದ ನಾಟಕ ಬಯಲು