Select Your Language

Notifications

webdunia
webdunia
webdunia
webdunia

ರಾಜ್ಯಪಾಲರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ

ರಾಜ್ಯಪಾಲರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ
ಕೋಲ್ಕತ್ತಾ , ಶುಕ್ರವಾರ, 15 ನವೆಂಬರ್ 2019 (09:22 IST)
ಕೋಲ್ಕತ್ತಾ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಿದ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಪರೋಕ್ಷವಾಗಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ  ವಿರುದ್ಧ ಕಿಡಿಕಾರಿದ್ದಾರೆ.




ಈ ವಿಚಾರದ ಬಗ್ಗೆ ಮಾತನಾಡಿದ ಅವರು, ಕೆಲವು ನಾಮನಿರ್ದೇಶಿತ ವ್ಯಕ್ತಿಗಳು ತಮ್ಮ ಗಡಿಯನ್ನು ಮೀರಿದ್ದಾರೆ. ಅವರ ನಡೆ ಕೇಂದ್ರ ಸರ್ಕಾರವನ್ನು ಮೀರಿಸಬಾರದು. ಈ ಬಗ್ಗೆ ಕೇಂದ್ರ ಸರ್ಕಾರ ಎಚ್ಚರವಹಿಸಬೇಕು  ಎಂದು ಹೇಳಿದ್ದಾರೆ.


ಸಾಮಾನ್ಯವಾಗಿ ನಾನು ಸಾಂವಿಧಾನಿಕ ಹುದ್ದೆಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಕೆಲವು ಜನರು ಬಿಜೆಪಿ ಮುಖವಾಣಿಗಳಂತೆ ವರ್ತಿಸುತ್ತಿದ್ದಾರೆ. ನನ್ನ ರಾಜ್ಯದಲ್ಲೂ ಏನು ನಡೆಯುತ್ತಿದೆ ಎಂಬುದನ್ನು  ನೀವು ನೋಡಿದ್ದೀರಿ. ಅವರು ಸಂಯುಕ್ತ ಆಡಳಿತವನ್ನು ನಡೆಸಲು ಬಯಸುತ್ತಾರೆ ಎಂದು ಮಮತಾ ಬ್ಯಾನರ್ಜಿ ಅವರು ಪರೋಕ್ಷವಾಗಿ ರಾಜ್ಯಪಾಲರನ್ನು ಕುಟುಕಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

‘ಟಗರು’ ಸಿದ್ದರಾಮಯ್ಯಗೆ ಚುಚ್ಚಿ ಚುಚ್ಚಿ ತಿವಿದ ಬಿ.ಸಿ.ಪಾಟೀಲ್