Select Your Language

Notifications

webdunia
webdunia
webdunia
webdunia

ತಾನೂ ತಿನ್ನಲ್ಲ, ತಿನ್ನಲೂ ಬಿಡಲ್ಲ ಅಂತಾರೆ ಮೋದಿ: ಖರ್ಗೆ ವಾಗ್ದಾಳಿ

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಲೋಕಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಪ್ರಧಾನಿ ಮೋದಿ ತಾನೂ ತಿನ್ನಲ್ಲ ತಿನ್ನುವವರನ್ನೂ ಬಿಡಲ್ಲ ಅಂತಾರೆ. ಆದರೆ ಅವರ ಸ್ನೇಹಿತರು ಸಾವಿರಾರು ಕೋಟಿ ರೂ ಲೂಟಿ ಹೊಡೆದು ವಿದೇಶಕ್ಕೆ ಪರಾರಿಯಾಗ್ತಾರೆ ಎಂದು ನೀರವ್ ಮೋದಿ ವಿಚಾರದಲ್ಲಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಇನ್ನು ಪದೇ ಪದೇ ಚಾಯ್ ವಾಲಾ ಎಂದು ಹೇಳಿಕೊಳ್ಳುವ ಮೋದಿ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ‘ಆಗಾಗ ತಾವು ಚಾಯ್ ವಾಲಾ ಎಂದು ಹೇಳಿಕೊಂಡು ತಿರುಗಬೇಕಾಗಿಲ್ಲ. ನಾನೂ ಕೂಡಾ ರೈತರ ಮಗ. ದೇಶಕ್ಕೆ ಹೊಸ ಹೊಸ ಯೋಜನೆಗಳನ್ನು ಕೊಡಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಬಿಜೆಪಿಗೆ ಸಂಸ್ಕೃತಿಯಿಲ್ಲ, ಮಾಡೋಕೆ ಬೇರೆ ಕೆಲಸವಿಲ್ಲ’