Publish Date: Fri, 16 Mar 2018 (09:09 IST)
Updated Date: Fri, 16 Mar 2018 (09:10 IST)
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಸ್ವಲ್ಪವಾದ್ರೂ ನಾಚಿಕೆ ಆಗಬೇಡ್ವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮೂಗಿನ ತುದಿಯಲ್ಲೇ ಎಸ್ಎಸ್ಸಿ ಹಗರಣವಾಗುತ್ತಿದೆ. ಉದ್ಯೋಗ ಕೊಡಿಸುತ್ತೀವಿ ಎಂದು ಅಧಿಕಾರಕ್ಕೆ ಬಂದಿರಿ. ಆದರೆ ನಿರುದ್ಯೋಗ ತಾಂಡವವಾಡುತ್ತಿದೆ. ವ್ಯಾಪಂ ಹಗರಣದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇಷ್ಟೆಲ್ಲಾ ಆದರೂ ನಿಮಗೆ ಸ್ವಲ್ಪವಾದ್ರೂ ನಾಚಿಕೆ ಆಗೋದು ಬೇಡ್ವಾ? ಎಂದು ರಾಹುಲ್ ಲೇವಡಿ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗಿರುವುದು ನೋಡಿದರೇ ಗೊತ್ತಾಗುತ್ತದೆ. ಜನ ಬಿಜೆಪಿ ಬಗ್ಗೆ ನಿರಾಶರಾಗಿದ್ದಾರೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಡ ಎಂದು ರಾಹುಲ್ ಟೀಕಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ