ಇಂಧೋರ್: ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗುವಾಗ ಎರಡು ವರ್ಷದ ಮಗನನ್ನು ನೋಡಿಕೊಳ್ಳಲು ಆಯಾಳನ್ನು ನೇಮಿಸಲಾಗಿತ್ತು. ಆದರೆ ಆಕೆ ಮಗುವಿನ ಪಾಲಿಗೆ ಅಕ್ಷರಶಃ ರಾಕ್ಷಸಿಯಾಗಿದ್ದಳು.
ಮಗು ಇತ್ತೀಚೆಗೆ ತೀರಾ ಅಸ್ವಸ್ಥನಾಗಿದ್ದರಿಂದ ಪೋಷಕರು ಆತನನ್ನು ವೈದ್ಯರ ಬಳಿ ಕರೆದೊಯ್ದಿದ್ದರು. ವೈದ್ಯರು ಆತನನ್ನು ಪರೀಕ್ಷಿಸಿ ಆಂತರಿಕ ಅವಯವಗಳಿಗೆ ಹಾನಿಯಾಗಿದೆ. ಯಾರೋ ಮಗುವಿಗೆ ಟಾರ್ಚರ್ ನೀಡಿದ್ದಾರೆಂದು ಹೇಳಿದ್ದರು. ಇದನ್ನು ಕೇಳಿ ಪೋಷಕರಿಗೆ ನಿಜಕ್ಕೂ ಗಾಬರಿಯಾಗಿತ್ತು.
ಹೀಗಾಗಿ ಮನೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿದರು. ಈ ವೇಳೆ ಆಯಾ ಮಗುವಿಗೆ ದೈಹಿಕ ಕಿರುಕುಳ ನೀಡುತ್ತಿರುವುದು ತಿಳಿದುಬಂದಿದೆ. ಇದೀಗ ಪೋಷಕರು ಆಯಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.