ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ ಮತ್ತು ಬಿಜೆಪಿ ಮೈತ್ರಿಕೂಟ ಮಹಾಯತಿ ನಡುವೆ ಭಾರೀ ಪೈಪೋಟಿಯಿದ್ದು, ಇಲ್ಲಿ ಈ ಬಾರಿ ಇತರರೇ ಕಿಂಗ್ ಮೇಕರ್ ಗಳಾಗುವ ಸಾಧ್ಯತೆಯಿದೆ.
ಮಹಾರಾಷ್ಟ್ರದಲ್ಲಿ ಇತ್ತೀಚೆಗಿನ ವರದಿ ಪ್ರಕಾರ ಎನ್ ಡಿಎ 135, ಎಂವಿಎ 120 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ ಇತರರು 10 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಇದೇ ಟ್ರೆಂಡ್ ಮುಂದುವರಿದರೆ ಇಲ್ಲಿ ಇತರರ ಸ್ಥಾನ ಮಹತ್ವದ ಪಾತ್ರ ವಹಿಸಲಿದೆ. ಹೀಗಾಗಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸರ್ಕಾರ ರಚಿಸಲು ತಂತ್ರಗಳು ಈಗಲೇ ಆರಂಭವಾಗಲಿದೆ.
ಮಹಾರಾಷ್ಟ್ರದಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಅಮಿತ್ ಠಾಕ್ರೆ, ಪೃಥ್ವಿರಾಜ್ ಚೌಹಾಣ್, ರವಿ ರಾಣಾ, ಸನಾ ಮಲಿಕ್ ಮುಂತಾದ ಪ್ರಮುಖ ಅಭ್ಯರ್ಥಿಗಳು ಮನ್ನಡೆಯಲ್ಲಿದ್ದಾರೆ. ಮಹಾರಾಷ್ಟ್ರದಲ್ಲಿ ಬಹುತಮಕ್ಕೆ 145 ಸ್ಥಾನಗಳನ್ನು ಗೆಲ್ಲಬೇಕಾಗುತ್ತದೆ. ಇದೀಗ ಮಹಾಯುತಿ ಮುನ್ನಡೆಯ ಆಧಾರದಲ್ಲಿ ಬಹುಮತದ ಸಮೀಪವಿದೆ.