ಮಹಾರಾಷ್ಟ್ರ: ಬಾವಿಗೆ ಬಿದ್ದ ಬೆಕ್ಕು ರಕ್ಷಣೆಗೆ ಹೋದ ಐವರು ದುರ್ಮರಣ

Sampriya
ಬುಧವಾರ, 10 ಏಪ್ರಿಲ್ 2024 (17:15 IST)
Photo Courtesy X
ಮಹಾರಾಷ್ಟ್ರ: ಇಲ್ಲಿನ ಅಹ್ಮದ್‌ನಗರದ ವಾಡ್ಕಿ ಗ್ರಾಮದಲ್ಲಿ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಐವರು ಪ್ರಾಣ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ.

ಮೃತರನ್ನು ಮಾಣಿಕ್ ಗೋವಿಂದ ಕಾಳೆ (65), ಸಂದೀಪ್ ಮಾಣಿಕ್ ಕಾಳೆ (36), ಬಬ್ಲು ಅನಿಲ್ ಕಾಳೆ (28), ಅನಿಲ್ ಬಾಪುರಾವ್ ಕಾಳೆ (53) ಮತ್ತು ಬಾಬಾಸಾಹೇಬ್ ಗಾಯಕವಾಡ (36) ಎಂದು ಗುರುತಿಸಲಾಗಿದೆ.

ಅಹ್ಮದ್‌ನಗರ ಜಿಲ್ಲೆಯ ನೆವಾಸಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಧನಂಜಯ್ ಜಾಧವ್ ಅವರ ಪ್ರಕಾರ, " ಮಂಗಳವಾರ ಬಾವಿಯಲ್ಲಿ ಬೆಕ್ಕು ಬಿದ್ದ ಘಟನೆ ನಡೆದಿದೆ. ಅದನ್ನು ರಕ್ಷಿಸಲು ಹೋಗಿದ್ದವನ ರಕ್ಷಣೆಗೆ ಮತ್ತೋರ್ವ ಹೋಗಿದ್ದಾನೆ. ಈ ವೇಳೆ ಅವನೂ ಅಪಾಯಕ್ಕೆ ಒಳಗಾಗಿ ಆತನ ರಕ್ಷಣೆಗೆ ಮತ್ತೋರ್ವ ಹೋಗಿದ್ದಾನೆ. ಹೀಗೇ ಐವರು ಪ್ರಾಣ ಕಳೆದುಕೊಂಡಿದ್ದಾರೆ.

ಕೊನೆಯವ ಸೊಂಟಕ್ಕೆ ಹಗ್ಗವನ್ನು ಕಟ್ಟಿ ಇಳಿದಿದ್ದರಿಂದ ಆತ ಪ್ರಾಣಪಾಯದಿಂದ ಪಾರಾಗಿದ್ದಾನೆ. ಆತ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.  ಗಾಯಗೊಂಡ ವ್ಯಕ್ತಿಯನ್ನು ವಿಜಯ್ ಮಾಣಿಕ್ ಕಾಳೆ (35) ಎಂದು ಗುರುತಿಸಲಾಗಿದೆ.

ಇನ್ನೂ ಬಾವಿಗೆ  ಪ್ರಾಣಿಗಳ ತ್ಯಾಜ್ಯ ಎಸೆದಿದ್ದರಿಂದ ಅದರಿಂದ ಹೊರಹೊಮ್ಮಿದ ಅನಿಲದಿಂದ ಐದು ಜನರು ಪ್ರಜ್ಞಾಹೀನರಾಗಿ ಸಾವನ್ನಪ್ಪಿದ್ದಾರೆ ಎಂದರು.


<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೊಬೈಲ್‌ನಲ್ಲಿ ಸಂಚಾರ ಸಾಥಿ ಆ್ಯಪ್‌ ಇನ್‌ಸ್ಟಾಲ್‌: ವಿವಾದ ಬೆನ್ನಲ್ಲೇ ಯೂಟರ್ನ್‌ ಹೊಡೆದ ಕೇಂದ್ರ ಸರ್ಕಾರ

ಸೂರಜ್‌ ಬೆನ್ನಲ್ಲೇ ಪ್ರಜ್ವಲ್ ರೇವಣ್ಣಗೂ ಬಿಗ್‌ಶಾಕ್: ಶಿಕ್ಷೆ ಅಮಾನತು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

ರಷ್ಯಾ ಅಧ್ಯಕ್ಷ ಪುಟಿನ್ ಭೇಟಿಗೆ ಬಂದೋಬಸ್ತ್ ನಡುವೆ ದೆಹಲಿಯ ಎರಡು ಕಾಲೇಜಿಗೆ ಬಾಂಬ್ ಬೆದರಿಕೆ

ಭಿನ್ನಾಭಿಪ್ರಾಯ ಬಗೆಹರಿದಿದೆ: ಸಿಎಂ ಕುರ್ಚಿ ಗುದ್ದಾಟಕ್ಕೆ ಪರಮೇಶ್ವರ್ ಪ್ರತಿಕ್ರಿಯೆ

ಯಾವತ್ತಾದ್ರೂ ಬಿಟ್ಟು ಕೊಡಲೇ ಬೇಕಾಲ್ವ, ಸಿಎಂ ಆಪ್ತ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ

ಮುಂದಿನ ಸುದ್ದಿ
Show comments