Webdunia - Bharat's app for daily news and videos

Install App

MahakumbhMela 2025: ಪವಿತ್ರಾ ಸ್ನಾನದಲ್ಲಿ ಪಾಲ್ಗೊಂಡ ರಾಜ್ಯದ 90ಸಾವಿರ ಕೈದಿಗಳು

Sampriya
ಶನಿವಾರ, 22 ಫೆಬ್ರವರಿ 2025 (16:46 IST)
Photo Courtesy X
ಲಕ್ನೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ 75 ಜೈಲುಗಳಲ್ಲಿ ಬಂಧಿತರಾಗಿರುವ ಸುಮಾರು 90 ಸಾವಿರ ಕೈದಿಗಳಿಗೆ ಮಹಾಕುಂಭದ ಪವಿತ್ರ ಸ್ನಾನ ಮಾಡಲು ಅವಕಾಶ ನೀಡಲಾಯಿತು.

ಅಧಿಕಾರಿಗಳು ಲಕ್ನೋ, ಅಯೋಧ್ಯೆ ಮತ್ತು ಅಲಿಘರ್‌ನ ವಿವಿಧ ನಗರಗಳ ಜೈಲುಗಳಿಗೆ ತ್ರಿವೇಣಿ ಸಂಗಮದ ಕೆಲವು ಪವಿತ್ರ ನೀರನ್ನು ತಂದುಕೊಡುವ ಮೂಲಕ, ಕೈದಿಗಳಿಗೆ ಪವಿತ್ರಾ ಸ್ನಾನದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸಿಕೊಡಲಾಯಿತು.

ಅಧಿಕಾರಿಗಳ ಪ್ರಕಾರ, ಸಂಗಮ್ ತ್ರಿವೇಣಿ ನೀರನ್ನು ಸಾಮಾನ್ಯ ನೀರಿನೊಂದಿಗೆ ಬೆರೆಸಿ ಸಣ್ಣ ಟ್ಯಾಂಕ್‌ಗಳಲ್ಲಿ ಸಂಗ್ರಹಿಸಲಾಗಿದೆ, ಕೈದಿಗಳಿಗೆ ಪವಿತ್ರ ಸ್ನಾನ ಮಾಡಲು ಮತ್ತು ಜೈಲಿನಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ.

ಲಕ್ನೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯುಪಿಯ ಜೈಲು ಸಚಿವ ದಾರಾ ಸಿಂಗ್ ಚೌಹಾಣ್, ಸುಮಾರು 90 ಸಾವಿರ ಕೈದಿಗಳಿಗೆ ಪವಿತ್ರ ಸ್ನಾನ ಮಾಡುವ ಅವಕಾಶವನ್ನು ನೀಡಲಾಗಿದೆ ಎಂದು ಹೇಳಿದರು.

ಸಾಮಾನ್ಯ ಜನರು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಅವರ ನಂಬಿಕೆಯ ಹೊರತಾಗಿಯೂ ಜೈಲುವಾಸದಲ್ಲಿರುವವರು ನಾಲ್ಕು ಗೋಡೆಗಳಿಂದ ಹೊರಬರಲು ಸಾಧ್ಯವಿಲ್ಲ ಎಂಬ  ದೃಷ್ಟಿಯಿಂದ ಕೈದಿಗಳ ಒತ್ತಾಯ ಮೇರೆಗೆ ಈ ಅವಕಾಶ ಕಲ್ಪಿಸಿಕೊಡಲಾಯಿತು.

ಜೈಲಿನ ಎಲ್ಲಾ ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಬೆಂಬಲದೊಂದಿಗೆ, ಉತ್ತರ ಪ್ರದೇಶದ ಸುಮಾರು ತೊಂಬತ್ತು ಸಾವಿರ ಕೈದಿಗಳು ಪವಿತ್ರಾ ಸ್ನಾನ ಮಾಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸೇನೆ, ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್‌: ರಾಯಚೂರಿನಲ್ಲಿ ಮುಸ್ಲಿಂ ವ್ಯಕ್ತಿ ಅರೆಸ್ಟ್‌

India Pakistan: ನಮ್ಮ ದೇಶದಲ್ಲಿನ್ನು ಪಾಕಿಸ್ತಾನ ಧ್ವಜ, ಸರಕು ಮಾರಾಟ ಮಾಡುವಂತಿಲ್ಲ

ಸೋಫಿಯಾ ಖುರೇಷಿ ವಿರುದ್ಧ ನಾಲಗೆ ಹರಿಬಿಟ್ಟ ಸಚಿವ ವಿಜಯ್ ಶಾಗೆ ಕ್ಲಾಸ್‌ ತೆಗೆದುಕೊಂಡ ಸುಪ್ರೀಂಕೋರ್ಟ್‌

ಪಾಕ್‌ನಲ್ಲಿ ಜಲಕ್ಷಾಮದ ಭೀತಿ: ಸಿಂಧೂ ಜಲಒಪ್ಪಂದ ಅಮಾನತು ಮರು ಪರಿಶೀಲನೆಗೆ ಗೋಗರೆಯುತ್ತಿರುವ ಪಾಕ್‌

ಯುದ್ಧದ ಕ್ರೆಡಿಟ್ ದೇಶದ ಎಲ್ಲಾ ಸೈನಿಕರಿಗೆ ಹೋಗಲಿ, ಮೋದಿಗೆ ಯಾಕೆ: ಸಂತೋಷ್ ಲಾಡ್

ಮುಂದಿನ ಸುದ್ದಿ
Show comments