ಶಾಕ್ ಆಗ್ತೀರಾ !ಆ ನಶೆ ಕನ್ಯೆ ಮಾಡಿದ್ದೇನು?

Webdunia
ಭಾನುವಾರ, 12 ಡಿಸೆಂಬರ್ 2021 (12:22 IST)
ಇಸ್ಲಾಮಾಬಾದ್ : ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಹಿಳೆ ಗೆಳೆಯನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ ಅಲ್ಲೇ ಮಲಗಿ ಗಾಢ ನಿದ್ರೆಗೆ ಜಾರಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಒಂದರಲ್ಲಿ 70 ವರ್ಷದ ಪುರುಷನ ಛಿದ್ರಗೊಂಡ ದೇಹದ ಭಾಗಗಳು ದೊರಕಿದ್ದು, ಅದೇ ಸ್ಥಳದಲ್ಲಿ 45 ವರ್ಷದ ಮಹಿಳೆಗಾಢ ನಿದ್ದೆಯಲ್ಲಿದ್ದಳು. ಈಕೆಯನ್ನು ಕೊಲೆ ಆರೋಪಿಯಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯ ಕುರಿತಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿ ಜುಬೇರ್ ನಜೀರ್ ಶೇಖ್, ಸದ್ದಾರ್ ಪ್ರದೇಶದಲ್ಲಿರುವ ಹಳೆಯ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಬಳಿ ಮನುಷ್ಯನ ಕೈಯ ಭಾಗಗಳು ಬಿದ್ದಿರುವುದು ಕಂಡುಬಂದಿದೆ ಎಂದು ನಮಗೆ ಕರೆಬಂದಿತು. ನಮ್ಮ ತಂಡವು ಸ್ಥಳಕ್ಕೆ ತೆರಳಿ ಫ್ಲ್ಯಾಟ್ನ ಕದ ತೆರೆಯಿತು.
ಅಲ್ಲಿ ಮನೆಯ ತುಂಬಾ ದೇಹವೊಂದರ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಮನೆಯಲ್ಲಿದ್ದ ಮಹಿಳೆ ಗಾಢ ನಿದ್ದೆಗೆ ಜಾರಿದ್ದಳು. ಮಹಿಳೆಯನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ವಾರದ ಹಿಂದೆಯೇ ಕೊಲೆ ನಡೆದಿರುವ ಸಾಧ್ಯತೆಯಿದ್ದರೂ ಕೊಲೆಯ ದಿನಾಂಕ ಇನ್ನೂ ಖಚಿತವಾಗಿಲ್ಲ ಎಂದು ಹೇಳಿದ್ದಾರೆ.
ರಕ್ತ ಮೆತ್ತಿದ್ದ ಬಟ್ಟೆಗಳು ಮತ್ತು ದೇಹವನ್ನು ತುಂಡರಿಸಲು ಬಳಸಿದ ಉಪಕರಣಗಳು ಸೇರಿದಂತೆ ಸ್ಥಳದಲ್ಲಿ ಹಲವು ಪ್ರೂಫ್ ಸಿಕ್ಕಿವೆ. ಆ ಹಿನ್ನೆಲೆಯಲ್ಲಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

 ಮಹಿಳೆಯು ನಶೆಯಲ್ಲಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಡ್ರಗ್ಸ್ ಸೇವಿಸಿದ್ದಳೆಂದು ಶಂಕಿಸಲಾಗಿದೆ. ಅವರಿಬ್ಬರು ಮದುವೆ ಆಗಿಲ್ಲವೆಂದು ಆರೋಪಿ ತಿಳಿಸಿದ್ದಾಳೆ. ಅವರಿಬ್ಬರು  ಸಂಬಂಧದಲ್ಲಿದ್ದರು. ದುಡ್ಡಿನ ವಿಚಾರದಲ್ಲಿ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು ಎಂಬುದಾಗಿ ನೆರೆಯವರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದಲಿತ ಸಂಘಟನೆಗಳಿಗೆ ನಂದೇ ಪ್ರಾಯೋಜಕತ್ವ ಏನಿವಾಗ ಎಂದ ಪ್ರಿಯಾಂಕ್ ಖರ್ಗೆ: ಇಲ್ಲಿದ್ರೆ ಸಸ್ಪೆಂಡ್ ಇಲ್ವಾ ಎಂದ ನೆಟ್ಟಿಗರು

Video: ದೀಪಾವಳಿ ಬೋನಸ್ ಬದಲು ಸೋನ್ ಪಾಪ್ಡಿ ಕೊಟ್ಟ ಬಾಸ್: ನೌಕರರು ಮಾಡಿದ್ದೇನು

Video: ಇರುಮುಡಿ ಹೊತ್ತು ಶಬರಿಮಲೆ 18 ಮೆಟ್ಟಿಲು ಹತ್ತಿದ ರಾಷ್ಟ್ರಪತಿ ದ್ರೌಪದಿ ಮುರ್ಮು: ಹೊಸ ದಾಖಲೆ

ಆರ್ ಎಸ್ಎಸ್ ನಲ್ಲಿದ್ದ ಅಶೋಕ್ ರೈ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ಯಾಕೆ: ಅವರೇ ಹೇಳಿದ್ದು ಹೀಗೆ

ಅಪ್ಪ ಅನಂತ್ ಕುಮಾರ್ ಸುದ್ದಿಗೆ ಬಂದಿದ್ದಕ್ಕೆ ಪ್ರಿಯಾಂಕ್ ಖರ್ಗೆಗೆ ಬೆಂಡೆತ್ತಿದ ಪುತ್ರಿ ಐಶ್ವರ್ಯಾ

ಮುಂದಿನ ಸುದ್ದಿ
Show comments