Select Your Language

Notifications

webdunia
webdunia
webdunia
webdunia

ಎಲ್ ಕೆ ಅಡ್ವಾಣಿ ನಿವಾಸಕ್ಕೆ ತೆರಳಿ ಭಾರತ ರತ್ನ ಪ್ರಧಾನ ಮಾಡಿದ ರಾಷ್ಟ್ರಪತಿ

LK Advani

Krishnaveni K

ನವದೆಹಲಿ , ಭಾನುವಾರ, 31 ಮಾರ್ಚ್ 2024 (13:26 IST)
Photo Courtesy: Twitter
ನವದೆಹಲಿ: ಇತ್ತೀಚೆಗಷ್ಟೇ ಮೋದಿ ಸರ್ಕಾರ ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿತ್ತು.

ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಡ್ವಾಣಿ ನಿವಾಸಕ್ಕೇ ತೆರಳಿ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತ ರತ್ನ ಪದಕ, ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ. ಈ ವೇಳೆ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ವೆಂಕಯ್ಯ ನಾಯ್ಡು, ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಉಳಿದ ಭಾರತ ರತ್ನ ಪ್ರಶಸ್ತಿ ವಿಜೇತರಿಗೆ ರಾಷ್ಟ್ರಪತಿ ಭವನದಲ್ಲೇ ಪ್ರಶಸ್ತಿ ಪ್ರಧಾನ ಮಾಡಲಾಗಿತ್ತು. ಆದರೆ ಅಡ್ವಾಣಿಯವರಿಗೆ ರಾಷ್ಟ್ರಪತಿ ಭವನಕ್ಕೆ ಬರಲಾಗಿರಲಿಲ್ಲ. 96 ವರ್ಷದ ಅಡ್ವಾಣಿ ಈಗ ಸಾರ್ವಜನಿಕವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ.

ಹೀಗಾಗಿ ಹಿರಿಯ ಮುತ್ಸುದ್ದಿ ರಾಜಕಾರಣಿಗೆ ಅವರ ನಿವಾಸಕ್ಕೇ ತೆರಳಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಮುಂಬರುವ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಹಿರಿಯ ನಾಯಕನ ಆಶೀರ್ವಾದವನ್ನೂ ಪಡೆದರು.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಸುಮಲತಾ-ಎಚ್ ಡಿ ಕುಮಾರಸ್ವಾಮಿ ಭೇಟಿ