ಸೆಲ್ಫಿ ನೆಪದಲ್ಲಿ ಮಹಿಳೆ, ಮಕ್ಕಳನ್ನು ಸೇತುವೆಯಿಂದ ತಳ್ಳಿದ ಲಿವ್ ಇನ್ ಪಾರ್ಟ್ನರ್ !

Webdunia
ಮಂಗಳವಾರ, 8 ಆಗಸ್ಟ್ 2023 (10:19 IST)
ಅಮರಾವತಿ : ಸೆಲ್ಫಿ ನೆಪದಲ್ಲಿ ಮಹಿಳೆ, 1 ವರ್ಷ ಹಾಗೂ 13 ವರ್ಷದ ಮಕ್ಕಳನ್ನು ಮಹಿಳೆಯ ಲಿವ್ ಇನ್ ಪಾರ್ಟ್ನರ್ ತುಂಬಿ ಹರಿಯುತ್ತಿದ್ದ ನದಿಯ ಸೇತುವೆಯಿಂದ ತಳ್ಳಿದ್ದು, ಘಟನೆಯಲ್ಲಿ 13ರ ಬಾಲಕಿ ಪವಾಡಸದೃಶದಂತೆ ತನ್ನ ಪ್ರಾಣ ಉಳಿಸಿಕೊಂಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ.

13 ವರ್ಷದ ಬಾಲಕಿ ಕೀರ್ತನ, ತನ್ನ ತಾಯಿ ಪುಪ್ಪಳ ಸುಹಾಸಿನಿ (36) ಹಾಗೂ ಬಾಲಕಿಯ 1 ವರ್ಷದ ಸಹೋದರಿ ಜರ್ಸಿಯನ್ನು ಭಾನುವಾರ ಮುಂಜಾನೆ ಗೋದಾವರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆಯಿಂದ ತಳ್ಳಲಾಗಿತ್ತು. ಬಾಲಕಿ ಈ ವೇಳೆ ಸೇತುವೆಗೆ ಅಳವಡಿಸಲಾಗಿದ್ದ ಪ್ಲಾಸ್ಟಿಕ್ ಪೈಪ್ ಅನ್ನು ಬಿಗಿಯಾಗಿ ಹಿಡಿದು, ಪೊಲೀಸರ ಸಹಾಯಕ್ಕಾಗಿ ತನ್ನ ಜೇಬಿನಿಂದ ಫೋನ್ ತೆಗೆದುಕೊಂಡು 100ಕ್ಕೆ ಕರೆ ಮಾಡಿದ್ದಾಳೆ.

ಮಹಿಳೆ ಹಾಗೂ ಮಕ್ಕಳನ್ನು ಸೇತುವೆಗೆ ತಳ್ಳಿದ ಆರೋಪಿ ಉಳವ ಸುರೇಶ್ ಸುಹಾಸಿನಿಯ ಲಿವ್ ಇನ್ ಪಾರ್ಟ್ನರ್ ಆಗಿದ್ದ. ಗಂಡನಿಂದ ದೂರವಾಗಿದ್ದ ಸುಹಾಸಿನಿಗೆ ಸುರೇಶ್ ಪರಿಚಯವಾಗಿತ್ತು. ಹೀಗೆ ಸುರೇಶ್ ಹಾಗೂ ಸುಹಾಸಿನಿ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು.

ಭಾನುವಾರ ಇಬ್ಬರು ಮಕ್ಕಳು ಹಾಗೂ ಸುಹಾಸಿನಿಯನ್ನು ಸುರೇಶ್ ಪಿಕ್ನಿಕ್ ಕರೆದುಕೊಂಡು ಹೋಗಿದ್ದ ಮಾತ್ರವಲ್ಲದೇ ಗೆಳತಿ ಹಾಗೂ ಆಕೆಯ ಮಕ್ಕಳನ್ನು ಕೊಲ್ಲುವ ಸಂಚು ರೂಪಿಸಿದ್ದ. ಸೆಲ್ಫಿ ನೆಪದಲ್ಲಿ ಗೋದಾವರಿ ನದಿ ಬಳಿ ಕಾರು ನಿಲ್ಲಿಸಿ, ಮೂವರನ್ನು ಸೇತುವೆ ಅಂಚಿಗೆ ಕರೆದುಕೊಂಡು ಹೋಗಿ ನದಿಗೆ ತಳ್ಳಿದ್ದಾನೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕುರ್ಚಿ ಫೈಟ್ ಗೆ ನಾನೂ ಇದ್ದೀನಿ ಎಂದು ಎಂಟ್ರಿ ಕೊಟ್ಟವರು ಯಾರು

ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಭೇಟಿಗೆ ದಿನಗಣನೆ: ರಾಜ್ಯ ಪ್ರವಾಸದ ಕಂಪ್ಲೀಟ್‌ ವೇಳಾಪಟ್ಟಿ ಇಲ್ಲಿದೆ

ಡಿಕೆಶಿ ಇಷ್ಟೆಲ್ಲಾ ಮಾಡೋ ಬದಲು ಅಮಿತ್ ಶಾ ಜೊತೆಗಿರುವ ಫೋಟೋ ಹಾಕಿದ್ರೆ ಸಾಕಾಗ್ತಿತ್ತು

ಆಡಳಿತ ಯಂತ್ರವು ಕೋಮಾ ಸ್ಥಿತಿಗೆ ತಲುಪಿದೆ: ಸಿಎಂ ಯಾರೆಂದು ಮೊದಲು ಸ್ಪಷ್ಟಪಡಿಸಿ ಎಂದ ಅಶೋಕ್‌

Karnataka Weather:ಹಿಂಗಾರು ಮಳೆ ಮತ್ತೆ ಚುರುಕು, ಬೆಂಗಳೂರಿನಲ್ಲಿ ಮಳೆ ಸಾಧ್ಯತೆ

ಮುಂದಿನ ಸುದ್ದಿ
Show comments