Publish Date: Tue, 26 Jul 2022 (18:29 IST)
Updated Date: Tue, 26 Jul 2022 (18:31 IST)
ಪೊಲೀಸ್ ಠಾಣೆ ಎಂದಾಕ್ಷಣ ಜನರಿಗೆ ಏನೋ ಒಂಥರಾ ಅಸಡ್ಡೆ, ಭಯ ಇರುತ್ತೆ. ಆದ್ರೆ ತಮಿಳುನಾಡಿನಲ್ಲೊಂದು ಪೊಲೀಸ್ ಠಾಣೆ ಇದೆ. ಇದು ಜನಸ್ನೇಹಿಯಾಗಿದ್ದು, ಇಲ್ಲಿಗೆ ಜನ ಪುಸ್ತಕ ಓದಲು ಬರುತ್ತಾರೆ. ಅಚ್ಚರಿ ಆದರೂ ಇದು ಸತ್ಯ. ಇಲ್ಲಿನ ಇನ್ಸ್‌ಪೆಕ್ಟರ್ ಆಸಕ್ತಿಯಿಂದ ಪೊಲೀಸ್ ಠಾಣೆ ಆವರಣದಲ್ಲಿ ಸಾರ್ವಜನಿಕ ಗ್ರಂಥಾಲಯವನ್ನು ತೆರೆದಿದ್ದಾರೆ.
ತಮಿಳುನಾಡಿನ ತೇಣಿ ಜಿಲ್ಲೆಯ ಚಿನ್ನಮನೂರು ಪೊಲೀಸ್ ಠಾಣೆ ಆವರಣದಲ್ಲಿ ಈ ಸಾರ್ವಜನಿಕ ಗ್ರಂಥಾಲಯ ನಿರ್ಮಿಸಲಾಗಿದೆ. ಇಲ್ಲಿ ನೂರಾರು ಸ್ಪೂರ್ತಿದಾಯಕ ಪುಸ್ತಕಗಳನ್ನು ಇಡಲಾಗಿದ್ದು, ಪೊಲೀಸ್ ಠಾಣೆಗೆ ಆಗಮಿಸುವ ಜನರು ಇಲ್ಲಿ ಕುಳಿತು ಪುಸ್ತಕ ಓದಬಹುದು. ಇನ್ಸ್‌ಪೆಕ್ಟರ್ ಶೇಖರ್ ಇಂತಹದ್ದೊಂದು ಅಪರೂಪದ ವ್ಯವಸ್ಥೆಯನ್ನು ಮಾಡಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.