Select Your Language

Notifications

webdunia
webdunia
webdunia
Friday, 11 April 2025
webdunia

ಕೇದಾರನಾಥದಲ್ಲಿ ಭೂಕುಸಿತ: ಐವರ ಶವ ಪತ್ತೆ, ಅವಶೇಷಗಳಡಿ ಇನ್ನಷ್ಟು ಯಾತ್ರಿಕರು

Kedarnath LandSlide

Sampriya

ಉತ್ತರಾಖಂಡ , ಮಂಗಳವಾರ, 10 ಸೆಪ್ಟಂಬರ್ 2024 (14:44 IST)
Photo Courtesy X
ಉತ್ತರಾಖಂಡ: ಕೇದರನಾಥ ಮಾರ್ಗದಲ್ಲಿ ಸೋಮವಾರ ಸಂಜೆ ಸಂಭವಿಸಿದ್ದ ಭೂಕುಸಿತದಲ್ಲಿ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಅವಶೇಷಗಳ ಅಡಿ ಇನ್ನಷ್ಟು ಯಾತ್ರಿಕರು ಮಂದಿ ಸಿಲುಕಿರುವ ಸಾಧ್ಯತೆ ಇದೆ.

ಅವಶೇಷಗಳಡಿಯಿಂದ ನಾಲ್ವರು ಯಾತ್ರಾರ್ಥಿಗಳು ಮೃತದೇಹಗಳನ್ನು ಇಂದು ಹೊರತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೃತರನ್ನು ಮಧ್ಯಪ್ರದೇಶದ ದುರ್ಗಾಭಾಯಿ ಖಾಪರ್ (50,) ಸಮನ್ ಭಾಯ್ (50), ಗುಜರಾತ್‌ನ ಭರತ್ ಭಾಯಿ ನಿರಾಲಾಲ್ (52) ಮತ್ತು ನೇಪಾಳದ ತಿತ್ಲಿ ದೇವಿ (70) ಎಂದು ಗುರುತಿಸಲಾಗಿದೆ.

ಕೇದಾರನಾಥಕ್ಕೆ ಭೇಟಿ ನೀಡಿದ್ದ ಯಾತ್ರಾರ್ಥಿಗಳ ತಂಡವೊಂದು ಸೋಮವಾರ ರಾತ್ರಿ 7.20ರ ಸುಮಾರಿಗೆ ಹಿಂದಿರುಗುತ್ತಿದ್ದ ವೇಳೆ ಭೂಕುಸಿತದಲ್ಲಿ ಸಿಲುಕಿಕೊಂಡಿದ್ದರು.

ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌) ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು.

ಮಧ್ಯಪ್ರದೇಶದ ಗೋಪಾಲ್ (50) ಎಂಬವರ ಮೃತದೇಹ ಸೋಮವಾರವೇ ಹೊರತೆಗೆಯಲಾಗಿತ್ತು. ಮೂವರನ್ನು ರಕ್ಷಣೆ ಮಾಡಲಾಗಿತ್ತು. ಪ್ರತಿಕೂಲ ಹವಾಮಾನ, ಗುಡ್ಡಜರಿತದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯುಂಟಾಗಿತ್ತು.

 

Share this Story:

Follow Webdunia kannada

ಮುಂದಿನ ಸುದ್ದಿ

ನೀರು ತಂದುಕೊಟ್ಟ ವೃದ್ಧ ಮಹಿಳೆಗೆ ಬಾಗಿಲು ಮುಚ್ಚಿ ಪ್ರಜ್ವಲ್ ರೇವಣ್ಣ ಏನೆಲ್ಲಾ ಮಾಡಿದ್ದರು ಇಲ್ಲಿದೆ ವಿವರ