Video: ಅಂಬೇಡ್ಕರ್ ಫೋಟೋ ಮುಂದೆ ಕಾಲ ಮೇಲೆ ಕಾಲು ಹಾಕಿ ಕೂತಿದ್ದ ಲಾಲೂ ಪ್ರಸಾದ್: ಮೋದಿ ವಾಗ್ದಾಳಿ

Krishnaveni K
ಶುಕ್ರವಾರ, 20 ಜೂನ್ 2025 (15:31 IST)
ಪಾಟ್ನಾ: ಅಂಬೇಡ್ಕರ್ ಫೋಟೋವನ್ನು ಕಾಲ ಬಳಿಯಿಟ್ಟು ಅದರ ಮುಂದೆ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಕಾಲ ಮೇಲೆ ಕಾಲು ಹಾಕಿ ಕುಳಿತಿರುವ ವಿಡಿಯೋ ವೈರಲ್ ಆಗಿತ್ತು. ಇದರ ಬಗ್ಗೆ ಈಗ ಪ್ರಧಾನಿ ಮೋದಿ ಇಂದು ಬಿಹಾರದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಬಿಹಾರದಲ್ಲಿ ಇಂದು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಆರ್ ಜೆಡಿ ಮುಖ್ಯಸ್ಥನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದು ಅವರಿಗೆ ದಲಿತರ ಮೇಲೆ ಎಷ್ಟು ಕೀಳು ಮನೋಭಾವವಿದೆ ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.

‘ಇತ್ತೀಚೆಗೆ ಲಾಲೂ ಯಾದವ್ ಅವರು ಬಾಬಾ ಸಾಹೇಬರ ಫೋಟೋ ಮುಂದೆ ಯಾವ ರೀತಿ ಕೂತಿದ್ದರು ಎಂಬುದನ್ನು ಇಡೀ ದೇಶ ಗಮನಿಸಿದೆ. ಇದಕ್ಕೆಲ್ಲಾ ಅವರು ಕ್ಷಮೆಯನ್ನೂ ಕೇಳಲ್ಲ. ಯಾಕೆಂದರೆ ಅವರಿಗೆ ದಲಿತರ ಬಗ್ಗೆ ಅಷ್ಟು ಅಸಡ್ಡೆಯಿದೆ’ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಹುಟ್ಟುಹಬ್ಬದ ಆಚರಣೆ ವೇಳೆ ಲಾಲೂ ಯಾದವ್ ಕುರ್ಚಿಯೊಂದರ ಮೇಲೆ ಕಾಲು ಹಾಕಿ ಕಾಲ ಮೇಲೆ ಕಾಲು ಹಾಕಿ ಕೂತಿರುತ್ತಾರೆ. ಈ ವೇಳೆ ಬೆಂಬಲಿಗರೊಬ್ಬರು ಅಂಬೇಡ್ಕರ್ ಫೋಟೋ ಹಿಡಿದುಕೊಂಡು ಫೋಟೋಗೆ ಪೋಸ್ ಕೊಡಲು ಬರುತ್ತಾರೆ. ಅವರು ಅಂಬೇಡ್ಕರ್ ಫೋಟೋವನ್ನು ಅದೇ ಕುರ್ಚಿಯ ಮೇಲೆ ಇಡುತ್ತಾರೆ. ಅಂಬೇಡ್ಕರ್ ಫೋಟೋಗೆ ಲಾಲೂ ಅವಮಾನ ಮಾಡಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕ್ಯಾಬಿನ್ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ, ಪೈಲಟ್ ವಿರುದ್ಧ ಪ್ರಕರಣ ದಾಖಲು

ದಕ್ಷಿಣ ಕನ್ನಡ ಜಿಲ್ಲೆಗೆ ಶೀಘ್ರದಲ್ಲೇ ಆನೆ ಕಾರ್ಯಪಡೆ

ಕೇರಳದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನಗಳಲ್ಲಿ ಭಾರೀ ಮಳೆ

ಧರ್ಮಸ್ಥಳ ಬುರುಡೆ ಪ್ರಕರಣ ಪ್ರಮುಖ ಹಂತದಲ್ಲಿರುವಾಗ ಮಹತ್ವದ ಬೆಳವಣಿಗೆ

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

ಮುಂದಿನ ಸುದ್ದಿ
Show comments