ಜಮ್ಮು ಕಾಶ್ಮೀರ: ಪಹಲ್ಗಾಮ್ ದಾಳಿ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದು ಅತ್ಯಂತ ಬೃಹತ್ ರೈಲ್ವೇ ಆರ್ಚ್ ಬ್ರಿಡ್ಜ್ ಉದ್ಘಾಟನೆ ಮಾಡಿದ್ದಾರೆ. ಈ ಸೇತುವೆಯ ವಿಹಂಗಮ ನೋಟದ ವಿಡಿಯೋ ಇಲ್ಲಿದೆ. 
									
			
			 
 			
 
 			
					
			        							
								
																	ಜಮ್ಮು ಕಾಶ್ಮೀರದಲ್ಲಿ ನೋಡಲೇಬೇಕಾದ ಸ್ಥಳಗಲ್ಲಿ ಇನ್ನು ಇದೂ ಒಂದಾಗಲಿದೆ. ಈ ರೈಲ್ವೇ ಸೇತುವೆ ವಿಶ್ವದಲ್ಲೇ ಅತೀ ಎತ್ತರದ ರೈಲ್ವೇ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೇಲೆ ಕಮಾನು ಆಕಾರದ ಸೇತುವೆ ಕೆಳಗೆ ಪ್ರಪಾತದಲ್ಲಿ ಚಿನಾಬ್ ನದಿಯನ್ನೊಳಗೊಂಡೊಂತೆ ವಿಹಂಗಮ ನೋಟವಿದೆ.
									
										
								
																	ಇದು ಐಫೆಲ್ ಟವರ್ ಗಿಂತಲೂ ಎತ್ತರದ ಸೇತುವೆಯಾಗಿದೆ. ಇದರ ನಿರ್ಮಾಣಕ್ಕೆ 1,486 ಕೋಟಿ ರೂ. ಖರ್ಚಾಗಿದೆ. ಇದರ ಎತ್ತರ ಬರೋಬ್ಬರಿ 1779 ಅಡಿ. 66000 ಕ್ಯು.ಮೀ. ಕಾಂಕ್ರೀಟ್ ಬಳಸಿ ಸೇತುವೆ ನಿರ್ಮಿಸಲಾಗಿದೆ. ಸೇತುವೆಯ ಒಟ್ಟು ಉದ್ದ 1,315 ಮೀ. 28000 ಟನ್ ಉಕ್ಕು ಬಳಸಿ ನಿರ್ಮಿಸಲಾಗಿದೆ.
									
											
							                     
							
							
			        							
								
																	2002 ರಲ್ಲಿ ಈ ಸೇತುವೆ ನಿರ್ಮಾಣಕ್ಕೆ ಒಪ್ಪಿಗೆ ಸಿಕ್ಕಿತ್ತು. ಆದರೆ ಇದು ಪೂರ್ಣಗೊಳ್ಳಲು ಇಷ್ಟು ವರ್ಷ ಬೇಕಾಯಿತು. ಈ ಸೇತುವೆ ಜಮ್ಮು ಮತ್ತು ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಮಾರ್ಗವಾಗಿ ಸಂಚರಿಸಬೇಕಾದರೆ ಈ ನಗರಗಳ ನಡುವೆ 5-6 ಗಂಟೆ ಸಮಯ ಬೇಕಾಗಿತ್ತು. ಆದರೆ ಈಗ ರೈಲ್ವೇ ಸೇತುವೆಯಿಂದ ಪ್ರಯಾಣದ ಅವಧಿ 2 ಗಂಟೆಯಷ್ಟು ಕಡಿತವಾಗಲಿದೆ.