ಕೇರಳ: ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಲಕ್ಷಾಂತರ ಭಕ್ತರು ದರ್ಶನಕ್ಕಾಗಿ ಹಲವಾರು ಗಂಟೆಗಳ ಕಾಲ ಸಾಲಿನಲ್ಲಿ ನಿಂತಿರುವ ಯಾತ್ರಾರ್ಥಿಗಳಿಗೆ ನೀರು ಸಿಗದೆ ಪರದಾಟಿದ ಬಗ್ಗೆ ದೂರುಗಳು ವರದಿಯಾಗಿವೆ.
ವಾರ್ಷಿಕ ಮಕರವಿಳಕ್ಕು ಯಾತ್ರೆಯ ಎರಡನೇ ದಿನದಂದು ಕೇರಳದ ಪಥನಂತಿಟ್ಟದಲ್ಲಿರುವ ಈ ಘಟನೆ ವರದಿಯಾಗಿದೆ.
ಹೊಸದಾಗಿ ನೇಮಕಗೊಂಡ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್ ಅವರು ಪ್ರತಿಕ್ರಿಯಿಸಿ, ಸರದಿಯಲ್ಲಿರುವ ಜನರನ್ನು ತಲುಪಲು ಮತ್ತು ಅವರಿಗೆ ನೀರು ಒದಗಿಸಲು 200 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಭಕ್ತರು ದರ್ಶನಕ್ಕಾಗಿ 18 ಮೆಟ್ಟಿಲುಗಳನ್ನು ಸ್ಥಿರವಾಗಿ ಏರಲು ಸಾಧ್ಯವಾಗುತ್ತದೆ ಮತ್ತು ಮುಂದೆ ಚಲಿಸಲು ಸರತಿಯನ್ನು ಬಿಟ್ಟು ಹೋಹಬಾರದೆಂದು ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.
ನಾನು ಇದುವರೆಗೂ ದೇವಸ್ಥಾನದ ಮೈದಾನದಲ್ಲಿ ಇಷ್ಟು ಬೃಹತ್ ಮತ್ತು ಅಪಾಯಕಾರಿ ಜನಸಂದಣಿಯನ್ನು ನೋಡಿಲ್ಲ. ಕೆಲವರು ಮುಂದೆ ಸಾಗಲು ಸರತಿಯನ್ನು ಬಿಟ್ಟು ಜಿಗಿಯುತ್ತಿರುವುದು ಗಮನಿಸಿದ್ದೇವೆ. ಜನಸಂದಣಿಯನ್ನು ನೋಡಿ ನನಗೂ ಭಯವಾಗುತ್ತಿದೆ ಎಂದು ಅವರು ಹೇಳಿದರು.
ನವೆಂಬರ್ 16ರಂದು ಮಕರ ವಿಳಕ್ಕು ಯಾತ್ರಾ ಋತು ಆರಂಭವಾಗಿದ್ದು, ಮಂಗಳವಾರ ಮಧ್ಯಾಹ್ನ 2 ಲಕ್ಷ ಭಕ್ತರು ದೇಗುಲಕ್ಕೆ ಆಗಮಿಸಿದ್ದಾರೆ.