Select Your Language

Notifications

webdunia
webdunia
webdunia
webdunia

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ: ಮೈಸೂರಿನಿಂದ ಲಖನೌಗೆ ವಿಶೇಷ ರೈಲು ಸೇವೆ

Kumbh Mela at Prayagraj

Sampriya

‌ಲಖನೌ , ಶನಿವಾರ, 28 ಡಿಸೆಂಬರ್ 2024 (19:08 IST)
Photo Courtesy X
‌ಲಖನೌ: ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿರುವ ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ಕುಂಭಮೇಳಕ್ಕಾಗಿ ಮೈಸೂರಿನಿಂದ ಲಕ್ನೋ ಜಂಕ್ಷನ್‌ಗೆ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.

ಕುಂಭಮೇಳದಲ್ಲಿ ಪಾಲ್ಗೊಳ್ಳುವ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಪೂರೈಲು ನೈರುತ್ಯ ರೈಲ್ವೆಯಿಂದ ಏಕಮುಖ ವಿಶೇಷ ರೈಲು ಸಂಚರಿಸಲಿವೆ.  ರೈಲು ಸಂಖ್ಯೆ 06216 ಮೈಸೂರು-ಲಖನೌ ಜಂಕ್ಷನ್ ಏಕಮುಖ ಸ್ಪೆಷಲ್ ಎಕ್ಸ್‌ಪ್ರೆಸ್‌ ಡಿ.29 ರ ಭಾನುವಾರ ರಾತ್ರಿ 12:30 ಕ್ಕೆ ಮೈಸೂರಿನಿಂದ ಹೊರಟು ಡಿ.31 ರ ಮಂಗಳವಾರ ನಸುಕಿನ 4 ಗಂಟೆಗೆ ಲಕ್ನೋ ಜಂಕ್ಷನ್ ತಲುಪಲಿದೆ.

ಈ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ ಜಂಕ್ಷನ್, ತುಮಕೂರು, ಅರಸೀಕೆರೆ ಜಂಕ್ಷನ್, ಕಡೂರು, ಚಿಕ್ಕಜಾಜೂರು ಜಂಕ್ಷನ್, ದಾವಣಗೆರೆ, ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ ಜಂಕ್ಷನ್, ಧಾರವಾಡ, ಬೆಳಗಾವಿ, ಘಟಪ್ರಭಾ, ಮಿರಜ್ ಜಂಕ್ಷನ್, ಸಾಂಗ್ಲಿ, ಕರಡ್, ಪುಣೆ ಜಂಕ್ಷನ್, ದೌಂಡ್ ಕಾರ್ಡ್ ಲೈನ್, ಅಹ್ಮದ್ನಗರ, ಮನ್ಮಾಡ್ ಜಂಕ್ಷನ್, ಭೂಸಾವಲ್ ಜಂಕ್ಷನ್, ಖಾಂಡ್ವಾ, ತಲ್ವಾಡಿಯಾ, ಭೋಪಾಲ್, ಖಾಂಡ್ವಾ, ತಲ್ವಾಡಿಯಾ, ಚನೇರಾ, ಖಾಂಡ್ವಾ, ತಲ್ವಾಡ್ಯ, ಚನೇರಾ, ಖಾಂಡ್ವಾ ನಿಲ್ದಾಣಗಳಲ್ಲಿ ನಿಲ್ಲಲಿದ್ದು, ಪ್ರಯಾಣಿಕರು ಸೇವೆಯನ್ನ ಬಳಸಿಕೊಳ್ಳಬಹುದು.  

ವಿಶೇಷ ರೈಲು 11 ಸೆಕೆಂಡ್ ಜನರಲ್ ಕ್ಲಾಸ್ ಬೋಗಿಗಳು, 7 ಸ್ಲೀಪರ್ ಕ್ಲಾಸ್ ಬೋಗಿಗಳು ಮತ್ತು ಎಸ್ಎಲ್ಆರ್/ಡಿ ಸೇರಿದಂತೆ 20 ಬೋಗಿಗಳನ್ನು ಒಳಗೊಂಡಿರುತ್ತದೆ. ಹೆಚ್ಚಿನ ಮಾಹಿತಿಯು ಭಾರತೀಯ ರೈಲ್ವೆಯ ವೆಬ್‌ಸೈಟ್ www.enquiry.indianrail.gov.in ನಲ್ಲಿ ಲಭ್ಯವಿದೆ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಸಚಿವ ಪ್ರಿಯಾಂಕ್‌ ಖರ್ಗೆ ಬಂಧನಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ